ವಾಷಿಂಗ್ಟನ್ : ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಟ್ರಂಪ್ ವಿರುದ್ಧ ಅಮೆರಿಕದಾದ್ಯಂತ ಆಕ್ರೋಶ ಮನೆ ಮಾಡುವಂತೆ ಮಾಡಿದೆ.
ಟ್ರಂಪ್ ಸೇನೆ ಪುಂಡರು ಸಂಸದರನ್ನು ಹುಡುಕಿ ಹೊಡೆಯಲು ಮುಂದಾಗಿರುವುದು ಇಡೀ ಅಮೆರಿಕಾ ಬೆಚ್ಚಿಬೀಳುವಂತೆ ಮಾಡಿದೆ.
ಎಲ್ಲಿ ಅವರು, ಎಲ್ಲಿ ಅವರು ಎಂದು ಸಂಸದರನ್ನು ಹುಡುಕಿ ಹುಡುಕಿ ಹೊಡೆಯಲು ಬಂದ ಡೊನಾಲ್ಡ್ ಟ್ರಂಪ್ ಬೆಂಬಲಿಗರು.
ಸಂಸದರೆಲ್ಲ ಓಡಿಹೋದ ಮೇಲೆ ಸದನದ ಮುಖ್ಯಸ್ಥರ ಕುರ್ಚಿಯ ಮೇಲೆ ಕುಳಿತು ಟೇಬಲ್ ಮೇಲೆ ಕಾಲುಹಾಕಿ ಕಪಿಚೇಷ್ಟೆ, ಕ್ಯಾಪಿಟಲ್ ಕಟ್ಟಡದ ಮೇಲೆ ‘ಟ್ರಂಪ್ ಪರ ಧ್ವಜಾರೋಹಣ’, ಬುಧವಾರ ಮಧ್ಯರಾತ್ರಿಯಿಡೀ ನಡೆದ ಹಿಂಸಾಚಾರ.
ಮಾಸ್ಕ್ ಕೂಡ ಧರಿಸದೆ ‘ಕ್ಯಾಪಿಟಲ್’ಗೆ ಮುತ್ತಿಗೆ ಹಾಕಿ ಕಟ್ಟಡದೊಳಗೆ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎಸೆದು ಕಿಟಕಿ ಗಾಜು, ಹೂಕುಂಡ, ಬಾಗಿಲುಗಳನ್ನು ಧ್ವಂಸಗೊಳಿಸಿದ್ದಾರೆ.
ಅವರನ್ನು ಹಿಮ್ಮೆಟ್ಟಿಸಲು ಪೊಲೀಸರು ಪೆಪ್ಪರ್ ಸ್ಪ್ರೇ ಸಿಡಿಸಿದರೂ ಪ್ರಯೋಜನವಾಗಲಿಲ್ಲ.
ಸಂಸತ್ ಕಲಾಪ ನಡೆಯುತ್ತಿದ್ದ ಜಂಟಿ ಸಮಾವೇಶದ ಸಭಾಂಗಣಕ್ಕೆ ನುಗ್ಗಿದ ಬೆಂಬಲಿಗರು ಅಲ್ಲಿಯವರೆಗೆ ಕುರ್ಚಿ, ಬೆಂಚುಗಳ ಕೆಳಗೆ ಅವಿತು ಕುಳಿತಿದ್ದ ಸಂಸದರು ಹೇಗೋ ಹೊರಗೆ ಓಡಿ ತಪ್ಪಿಸಿಕೊಂಡರು.
ಈ ವೇಳೆ ಸಂಸತ್ತಿನಲ್ಲಿ ಎಲೆಕ್ಟೋರಲ್ ಕಾಲೇಜ್ ನ ಮತ ಎಣಿಕೆಗೆಂದು ತೆರೆಯಲಾಗಿದ್ದ ಮತಪೆಟ್ಟಿಗೆಗಳನ್ನು ರಕ್ಷಿಸಿಕೊಳ್ಳಲಾಯಿತು.
PublicNext
08/01/2021 09:30 am