ವಾಷಿಂಗ್ಟನ್: ಡೋನಾಲ್ಡ್ ಟ್ರಂಪ್ ಪರ ಪ್ರತಿಭಟನೆಯಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ವ್ಯಕ್ತಿಯೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಬಿಜೆಪಿ ನಾಯಕರು ಹಾಗೂ ಅನೇಕ ಭಾರತೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿರುವಾಗ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟಲ್ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಭಾರತದ ರಾಜಕಾರಣಿ, ಬಿಜೆಪಿ ಮುಖಂಡ ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.
1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಅಡಾಲ್ಫ್ ಹಿಟ್ಲರ್ ಮುಂದೆ ಭಾರತ ಧ್ವಜ ಹಿಡಿದು ನಡೆದ ಘಟನೆಯನ್ನು ಕ್ಯಾಪಿಟಲ್ ಹಿಲ್ಸ್ ಪ್ರತಿಭಟನೆಗೆ ಹೋಲಿಸಲಾಗಿದೆ. ವರುಣ್ ಗಾಂಧಿ ಟ್ವೀಟಿಗೆ ಪ್ರತಿಕ್ರಿಯಿಸಿರುವ ಅನೇಕ ನೆಟ್ಟಿಗರು, ನಿಮ್ಮ ನಾಯಕ (ಪ್ರಧಾನಿ ನರೇಂದ್ರ ಮೋದಿ) ಅವರು ಡೋನಾಲ್ಡ್ ಟ್ರಂಪ್ ಚುನಾವಣೆ ಸಂದರ್ಭದಲ್ಲಿ ನೆರವಾಗಿದ್ದು ಮರೆತು ಹೋಗಿದೆಯೇ. ಟ್ರಂಪ್ ಬೆಂಬಲಿಸುವ ಇಂಡೋ ಅಮೆರಿಕನ್ನರು ಇದ್ದಾರೆ. ಅವರಲ್ಲೇ ಯಾರೋ ಭಾರತ ಧ್ವಜ ಹಿಡಿದಿರಬಹುದು ಎಂದು ಹೇಳಿದ್ದಾರೆ.
PublicNext
07/01/2021 04:15 pm