ನವದೆಹಲಿ: ವಿಶ್ವದೆಲ್ಲೆಡೆ ಡೆಡ್ಲಿ ಸೋಂಕು ಅಟ್ಟಹಾಸ, ಮಳೆಗಾಲವಲ್ಲದಿದ್ದರೂ ಅಲ್ಲಲ್ಲಿ ಮಳೆ,ರಾಜಕೀಯ ಕಿತ್ತಾಟ ಒಟ್ಟಾರೆಯಲ್ಲಿ ಪ್ರಪಂಚದಲ್ಲಿ ನೆಮ್ಮದಿ ಎಂಬುವುದು ಕಣ್ಮರೆಯಾದಂತಿದೆ.
ಈ ನಡುವೆ ಚೀನಾದ ಖ್ಯಾತ ಉದ್ಯಮಿ ಮತ್ತು ಅಲಿಬಾಬಾ ಗ್ರೂಪ್ ಆಫ್ ಕಂಪನಿ ಸ್ಥಾಪಕ ಜಾಕ್ ಮಾ ಕಳೆದ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಕೊಳ್ಳುತ್ತಿಲ್ಲ ಎಂದು ಸುದ್ದಿಯಾಗಿತ್ತು.
ತಾವೇ ನಿರ್ಮಿಸುತ್ತಿರುವ ಆಫ್ರಿಕಾದ ಟ್ಯಾಲೆಂಟ್ ಶೋನ ಫೈನಲ್ ಎಪಿಸೋಡ್ ನಲ್ಲೂ ಅವರು ಕಾಣಿಸಿಕೊಳ್ಳದಿದ್ದರಿಂದ ಚೀನಾದ ಹೈ ಪ್ರೊಫೈಲ್ ಉದ್ಯಮಿ ಎಲ್ಲಿ? ಎಂಬ ಪ್ರಶ್ನೆಗಳು ಎದ್ದಿದ್ದವು.
ಇದೀಗ, 56 ವರ್ಷದ ಚೀನಾ ಉದ್ಯಮಿ ಉದ್ದೇಶಪೂರ್ವಕವಾಗಿಯೇ ಭೂಗತರಾಗಿದ್ದಾರೆ.
‘ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವುದರಿಂದ ಕೆಲ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಸೂಕ್ತವೆಂದು ಜಾಕ್ ಮಾಗೆ ಸಲಹೆ ನೀಡಲಾಗಿದೆ ಎಂದು ವರದಿಯಾಗಿದೆ.
ನೇರ ನುಡಿಯ ವ್ಯಕ್ತಿತ್ವದಿಂದ ಹೆಸರಾದ ಜಾಕ್ ಮಾ, ಅದೊಂದು ದಿನ ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು.
ಇತ್ತಿಚೆಗೆ ಅಲಿಬಾಬಾ ಸಂಸ್ಥೆ ವಿರುದ್ಧ ಚೀನಾ ಸರ್ಕಾರ ಏಕಸ್ವಾಮ್ಯ ವಿರೋಧಿ ತನಿಖೆ ಆರಂಭಿಸಿತು.
ಅಂದಿನಿಂದ ಚೀನಾ ಹೆಜ್ಜೆ ಹೆಜ್ಜೆಗೂ ಜಾಕ್ ಮಾ ಟೆಕ್ ಸಾಮ್ರಾಜ್ಯವನ್ನು ನಿಗ್ರಹಿಸುವ ಪ್ರಯತ್ನ ನಡೆಸಿದೆ.
ಕೋವಿಡ್ ಕಾಲದಲ್ಲಿ ಅಧಿಕ ನಷ್ಟ ಅನುಭವಿಸಿದ್ದ ಅಲಿಬಾಬಾ ಗ್ರೂಪ್ ಚೇತರಿಕೆಗೆ ಜಾಕ್ ಮಾ ಆಡಿದ ಮಾತುಗಳೇ ಮುಳುವಾಗಿವೆ.
ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ನಿಗ್ರಹಿಸಿದ ಹಲವು ಉದಾಹರಣೆಗಳಿವೆ.
ಹೀಗಾಗಿಯೇ ಅವರು ಉದ್ದೇಶಪೂರ್ವಕವಾಗಿ ಭೂಗತರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆಲ್ಲ ಕಣ್ಮರೆಯಾಗಿರುವ ಜಾಕ್ ಮಾ ಉತ್ತರಿಸಬೇಕಿದೆ.
PublicNext
07/01/2021 02:34 pm