ಲಂಡನ್ : ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಎನ್ನುವ ಹಾಡು ಕೇಳುತ್ತಿದ್ದಂತೆ ಎಣ್ಣೆ ಹೊಡೆದ ಹುಡುಗಿ ಏನ್ ಮಾಡಿದ್ದಾಳೆನೋ ಎನ್ನುವ ಬಾವ ಎಲ್ಲರಲ್ಲೂ ಬರುವುದು ಸಾಮಾನ್ಯ.
ಎಸ್ ಪಾನಮತ್ತ ಬ್ರಿಟಿಷ್ ಯುವತಿಯೊಬ್ಬಳು ಟಂಬಲ್ ಡ್ರೈಯರ್ ನಲ್ಲಿ ಸಿಲುಕಿ ಪರದಾಡಿದ ಘಟನೆ ಇಂಗ್ಲೆಂಡ್ ಹಂಬರ್ಸೈಡ್ ನಗರದಲ್ಲಿ ನಡೆದಿದೆ.
ಇನ್ನೂ ಇವಳನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿಯೇ ಬರಬೇಕಾಯಿತು.
ಅಲ್ಲಿ ನಡೆದಿರುವ ಪ್ರಸಂಗ ವಿಡಿಯೋ ಸದ್ಯ ಬಾರೀ ವೈರಲ್ ಆಗಿದೆ.
21ರ ಪ್ರಾಯದ ಯುವತಿ ಹೆಸರು ರೋಸಿ ಕೋಲ್ ತನ್ನ ಸಹವಾಸಿಗಳ ಜತೆ ಸೇರಿ ಮದ್ಯ ಸೇವಿಸಿದ್ದ ರೋಸಿ, ಮದ್ಯದ ನಶೆಯಲ್ಲಿ ಟಂಬಲ್ ಡ್ರೈಯರ್ ಒಳಗೆ ಹೋಗಲು ಧೈರ್ಯ ಮಾಡಿ ಹೊರಬರಲಾಗದೆ ರೋಸಿ ಸಿಲುಕಿದ್ದಾಳೆ.
ಗೆಳತಿ ಆವಸ್ಥೆ ಕಂಡ ಫ್ರೆಂಡ್ಸ್ ಸಹ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಹಂಬರ್ಸೈಡ್ ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿ ಗಾಯಗೊಳ್ಳದಂತೆ ಸುರಕ್ಷಿತವಾಗಿ ರೋಸಿಯನ್ನು ಯಂತ್ರದಿಂದ ಬಿಡಿಸಿದ್ದಾರೆ.
ಯುವತಿ ಸುಮಾರು 20 ನಿಮಿಷ ಡ್ರೈಯರ್ ನಲ್ಲಿ ಸಿಲುಕಿದ್ದಳು. ಯಂತ್ರದಿಂದ ಹೊರಬಂದ ಬೆನ್ನಲ್ಲೇ ರೋಸಿ ತುಂಬಾ ಸಂತಸಗೊಂಡು ಕುಣಿದಾಡಿದ್ದಾಳೆ.
PublicNext
04/10/2020 01:37 pm