ತೈಪೆ (ತೈವಾನ್): ಭಾರತ-ಚೀನಾ ಗಡಿ ಲಡಾಖ್‌ಗೆ ಬರಲ್ಲ ಎಂದು ಚೀನಾ ಸೈನಿಕರು ಕಣ್ಣೀರಿಟ್ಟಿದ್ದಾರೆ ಎನ್ನಲಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಡಾಖ್ ಗಡಿಯಲ್ಲಿ ಪದೇ ಪದೇ ತಗಾದೆ ತೆರೆಯುತ್ತಿರುವ ಚೀನಾ ಸೇನೆಗೆ ಭಾರತೀಯ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ಈಗ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರ ಅಸಲಿಯತ್ತು ಬೇರೆಯೇ ಇದೆ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ಪಾಕಿಸ್ತಾನದ ಹಾಸ್ಯ ಕಲಾವಿದ ಜಿಯಾದ್ ಹಮೀದ್ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, "ಲಡಾಖ್ ಗಡಿ ಭಾಗಕ್ಕೆ ತೆರಳಲು ಸಿದ್ಧರಿಲ್ಲದ ಈ ಯೋಧರಿಗೆ ಪಾಕಿಸ್ತಾನಿಯರು ಆತ್ಮಸ್ಥೈರ್ಯ ತುಂಬಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿರುವ 10 ತರುಣ ಸೈನಿಕರು ಚೀನಾದ ಅನ್ಹುಯಿ ಪ್ರಾಂತ್ಯದ ಯಿಂಗ್ಜೋವು ಜಿಲ್ಲೆಯವರಾಗಿದ್ದಾರೆ. ಅವರು ಈಗಷ್ಟೇ ಕಾಲೇಜು ಮುಗಿಸಿ ಸ್ವಯಂಪ್ರೇರಿತರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದಾದವರು ಎನ್ನಲಾಗಿದೆ.
PublicNext
23/09/2020 04:34 pm