ಮಾಸ್ಕೋ: ನಮ್ಮ ಊರು, ನಗರದ ಭಾಗದ ಬೀದಿಗಳಲ್ಲಿ ನಾಯಿಗಳ ಹಿಂಡನ್ನು ನೋಡಿರುತ್ತೇವೆ. ಈ ಬಿದಿ ನಾಯಿಗಳನ್ನು ನಿಯಂತ್ರಿಸಲು ಪುರಸಭೆ ನಿಗಮವು ಕಾರ್ಯನಿರ್ವಹಿಸುತ್ತದೆ. ಆದರೆ ಅವುಗಳ ಸಂಖ್ಯೆ ಮಾತ್ರ ಕಡಿಮೆಯಾಗುವ ಹೆಚ್ಚುತ್ತಲೇ ಇದೆ. ಇಂತಹ ಬೀದಿ ನಾಯಿಗಳ ದಾಳಿ, ಉಂಟು ಮಾಡುವ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಅನೇಕ ದೇಶಗಳಲ್ಲಿಯೂ ಇದೆ.
ರಷ್ಯಾದ ಸೈಬೀರಿಯಾದಲ್ಲಿ 20 ವರ್ಷದ ಯುವತಿ ಟಟಯಾನಾ ಲಾಸ್ಕುಟ್ನಿಕೋವಾ 10 ಬೀದಿ ನಾಯಿಗಳ ದಾಳಿಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬ್ಯೂಟಿಷಿಯನ್ ಆಗಿರುವ ಯುವತಿಯು ಡಿಸೆಂಬರ್ 23ರಂದು ತನ್ನ ಮನೆಯ ಉಲಾನ್ ಉಡೆ ನಗರದ ಹೊರಗೆ ನಡೆದು ಹೋಗುತ್ತಿದ್ದರು. ಭಾರೀ ಚಳಿ ಇದ್ದಿದ್ದರಿಂದ ಜಾಕೆಟ್ ಧರಿಸಿದ್ದರು. 22 ಡಿಗ್ರಿ ತಾಪಮಾನದ ನಡುವೆ ನಾಯಿಗಳು ಅವರ ಮೇಲೆ ದಾಳಿ ನಡೆಸಿ ಮುಖ, ಕಾಲು, ಹಿಂಭಾಗದ ಮೇಲೆ ಗಂಭೀರವಾಗಿ ಗಾಯ ಮಾಡಿವೆ.
ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವರದಿಯಾಗಿದೆ.
PublicNext
25/12/2020 10:14 am