ಅಬುಧಾಬಿ: ಹೆಮ್ಮಾರಿ ಕೊರೊನಾ ವೈರಸ್ ಅನೇಕರ ಉದ್ಯೋಗ ಕಿತ್ತುಕೊಂಡು ಸಂಕಷ್ಟಕ್ಕೆ ದೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಅನಿವಾಸಿ ಭಾರತೀಯರೊಬ್ಬರು ಕೆಲಸ ಕಳೆದುಕೊಂಡರೂ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.
ಹೌದು. ಲಾಟರಿ ಹೊಡೆದರೆ ಯಾರು ಬೇಕಾದರೂ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಲು ಸಾಧ್ಯ ಅಲ್ವಾ. ಇದು ಕೇರಳ ಮೂಲದ ನವನೀತ್ ಸಂಜೀವನ್ ಜೀವನದಲ್ಲಿ ನಿಜವಾಗಿದೆ. 30 ವರ್ಷದ ನವನೀತ್ ಅವರು ಅಬುಧಾಬಿ ಮೂಲದ ಕಂಪೆನಿಯಲ್ಲಿ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಕೋವಿಡ್ ಸೃಷ್ಟಿಸಿದ ಸಂಕಷ್ಟದಿಂದ ಕಂಪನಿಯು ಕೆಲಸ ಬಿಡುವಂತೆ ನವಜೀತ್ ಅವರಿಗೆ ಕೆಲಸ ಬಿಡುವಂತೆ ಸೂಚಿಸಿತ್ತು.
ನೋಟಿಸ್ ಪೀರಿಯಡ್‌ನಲ್ಲಿರುವ ನವಜೀತ್ ಕೆಲಸಕ್ಕಾಗಿ ಸಂದರ್ಶನ ಮುಗಿಸಿ ಕಾಯುತ್ತಿದ್ದರು. ಈ ವೇಳೆ ಒಂದು ಫೋನ್ ಕರೆ ಬಂದಿದ್ದು, ಅವರ ಜೀವನವನ್ನೇ ಬದಲಾಯಿಸಿದೆ. ''ನೀವು ನವೆಂಬರ್ 22ರಂದು ಆನ್‌ಲೈನ್‌ನಲ್ಲಿ ಖರೀದಿಸಿದ್ದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿದೆ. ಡಿಡಿಎಫ್ ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ 1 ಮಿಲಿಯನ್ ಡಾಲರ್ (7.4 ಕೋ.ರೂ.) ಬಹುಮಾನ ಗೆದ್ದಿದ್ದೀರಿ ಎಂದು ದುಬೈ ಡ್ಯೂಟಿ ಫ್ರೀ (ಡಿಡಿಎಫ್) ಲಾಟರಿ ಸಂಸ್ಥೆ ತಿಳಿಸಿದೆ. ಈ ವಿಚಾರ ಕೇಳಿದ ನವಜೀತ್ ಫುಲ್ ಖುಷಿಯಾಗಿದ್ದಾರೆ.
PublicNext
22/12/2020 03:55 pm