ಸಿಡ್ನಿ: ವಿದ್ಯಾರ್ಥಿನಿಯೊಬ್ಬಳು ತಾನು ಧರಿಸಿದ ಒಳ ಉಡುಪು ಹಾಗೂ ಹಾಟ್‌ಪ್ಯಾಂಟ್‌ಗಳನ್ನು ಮಾರುವ ಮೂಲಕ ಪ್ರತಿ ತಿಂಗಳು 60 ಸಾವಿರಕ್ಕೂ ಅಧಿಕ ಹಣ ಸಂಪಾದಿಸುತ್ತಿದ್ದಾಳೆ.
ನ್ಯೂಕ್ಯಾಸ್ಟಲ್ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 30 ವರ್ಷದ ಮೆಲ್ ಬ್ರೌನ್ ಭೌತಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾರೆ. ಆನ್‌ಲೈನ್ ವೆಬ್‌ಸೈಟ್ ಮೂಲಕ ತಾನು ಧರಿಸಿದ ಒಳ ಉಡುಪುಗಳನ್ನು ವಿಶ್ವದಾದ್ಯಂತ ಜನರಿಗೆ ಮಾರಾಟ ಮಾಡುತ್ತಿದ್ದಾಳೆ. ಇದರಿಂದ ಬಂದ ಹಣದಿಂದ ಮೆಲ್ ಬ್ರೌನ್ ತನ್ನ ಕಾಲೇಜು ಶುಲ್ಕ ಪಾವತಿಸುತ್ತಿದ್ದಾಳೆ ಎಂದು ವರದಿಯಾಗಿದೆ.
ಒಂದು ದಿನ ತಮಾಷೆಯಾಗಿ ಬಳಸಿದ ಹ್ಯಾಲೋವೀನ್ ಮಾಸ್ಕ್ ಅನ್ನು ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲು ಮುಂದಾದೆ. ಕೆಲವು ಗಂಟೆಗಳಲ್ಲೇ ಆ ಮಾಸ್ಕ್ ಮಾರಾಟವಾದಾಗ ಆಶ್ಚರ್ಯವಾಗಿತ್ತು. ಅಲ್ಲದೆ ಅನೇಕರು ನನ್ನ ಕೈಗವಸುಗಳನ್ನು 15 ಪೌಂಡ್ (ಸುಮಾರು 1400 ರೂ.)ಗಳಿಗೆ ಖರೀದಿಸಲು ಮುಂದಾದರು. ಹೀಗಾಗಿ ನಾನು ಧರಿಸಿದ್ದ ಒಳ ಉಡುಪುಗಳನ್ನು ಜನರಿಗೆ ಮಾರಾಟ ಮಾಡುವ ಯೋಚಿಸಿದೆ. ಇದು ಯಶಸ್ವಿಯಾಯಿತು ಎಂದು ಮೆಲ್ ಬ್ರೌನ್ ಹೇಳಿದ್ದಾರೆ.
ಸಾಮಾನ್ಯವಾಗಿ ನಾನು ಎರಡು ದಿನಗಳವರೆಗೆ ಒಳ ಉಡುಪುಗಳನ್ನು ಧರಿಸುತ್ತೇನೆ. ಈ ಸಮಯದಲ್ಲಿ ಬೆಳಿಗ್ಗೆ ವಾಕ್, ಕಿರಾಣಿ ಅಂಗಡಿಗೆ ಹೋಗುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ. ಅದರ ನಂತರ ಅವುಗಳನ್ನು ತೊಳೆದು ಮಾರಾಟಕ್ಕೆ ಇಡುತ್ತೇನೆ. ಆದರೆ ಕಳೆದ ಕೆಲ ದಿನಗಳಿಂದ ನನ್ನ ಒಳ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಒಳ ಉಡುಪುಗಳನ್ನು ತೊಳೆಯುವುದೇ ಸವಾಲಿನ ಕೆಲಸವಾಗಿದೆ ಎಂದು ಮೆಲ್ ಬ್ರೌನ್ ತಿಳಿಸಿದ್ದಾರೆ.
ಬ್ರೌನ್ ಅವರು ಗ್ರಾಹಕರಿಂದ ವಿಶೇಷ ವಿನಂತಿಗಳನ್ನು ಸಹ ಪಡೆಯುತ್ತಾರಂತೆ. ನಾನು ಬಿಗಿಯಾದ ಹಾಟ್‌ಪ್ಯಾಂಟ್ ಧರಿಸಿ ಜಂಪಿಂಗ್ ವ್ಯಾಯಾಮ ಮಾಡುತ್ತೇನೆ. ತಾಜಾ ಹಣ್ಣುಗಳ ಮೇಲೆ ನಡೆಯುವ ಸೆಕ್ಸಿ ವಿಡಿಯೋವನ್ನು ಕಳುಹಿಸಲು ಒಬ್ಬರು ನನ್ನನ್ನು ವಿನಂತಿಸಿದ್ದರು. ಕೇವಲ 10 ಸೆಕೆಂಡುಗಳ ಆ ವಿಡಿಯೋದಿಂದ 45 ಪೌಂಡ್ (ಸುಮಾರು 4,300 ರೂ.) ಪಡೆದಿದ್ದೇನೆ ಎಂದು ಮೆಲ್ ಬ್ರೌನ್ ಹೇಳಿದ್ದಾರೆ.
ಮಾರ್ಚ್‌ನಿಂದ ಈ ಕೆಲಸವನ್ನು ಪ್ರಾರಂಭಿಸಿದೆ. ಈವರೆಗೂ ಅನೇಕ ಗ್ರಾಹಕರಿಂದ ಲಕ್ಷ ಲಕ್ಷ ಹಣ ಗಳಿಸಿದ್ದೇನೆ ಎನ್ನುತ್ತಾರೆ ಮೆಲ್ ಬ್ರೌನ್.
PublicNext
15/12/2020 07:35 pm