ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯೂಜಿಲ್ಯಾಂಡ್ : ಹಿಜಾಬ್' ಧರಿಸಿದ ಮೊದಲ ಮುಸ್ಲಿಂ ಮಹಿಳಾ ಕಾನ್ಸ್ಟೆಬಲ್

ದುಬೈ: ಾಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುವ ಮೂಲಕ ಮಹಿಳೆ ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಸದ್ಯ ನ್ಯೂಜಿಲೆಂಡ್ ನ ಸರ್ಕಾರ ಮೊದಲಬಾರಿಗೆ ಪೊಲೀಸ್ ಪಡೆಯ ಸಮವಸ್ತ್ರದ ಭಾಗವಾಗಿ ಪರಿಚಯಿಸಿರುವ ವಿಶೇಷ ವಿನ್ಯಾಸದ ಹಿಜಾಬ್ (ತಲೆಗವಸು)ಅನ್ನು ಮೊದಲ ಮಹಿಳಾ ಕಾನ್ಸ್ ಸ್ಟೆಬಲ್ ಝೀನಾ ಆಲಿ ಧರಿಸಿದ್ದಾರೆ.

ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರುವಂತೆ ಪ್ರೋತ್ಸಾಹಿಸುವ ಸಲುವಾಗಿ ನ್ಯೂಜಿಲೆಂಡ್ ಸರ್ಕಾರ ಮಹಿಳಾ ಪೊಲೀಸರಿಗಾಗಿ ಈ ವಿಶೇಷ ಹಿಜಾಬ್ ವಿನ್ಯಾಸಗೊಳಿಸಿ ಪರಿಚಯಿಸಿದೆ.

ಮೂವತ್ತರ ವಯಸ್ಸಿನ ಝೀನಾ ಅಲಿ ನ್ಯೂಝಿಲ್ಯಾಂಡ್ ನಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸಿರುವ ಮೊತ್ತ ಮೊದಲ ಮಹಿಳಾ ಪೊಲೀಸ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜೀನಾ, ಮೊದಲ ಪದವೀಧರ ಪೊಲೀಸ್ ಅಧಿಕಾರಿ ಮಾತ್ರವಲ್ಲ, ನ್ಯೂಜಿಲೆಂಡ್ನಲ್ಲಿ ಪೊಲೀಸ್ ಪಡೆಯ ಸಮವಸ್ತ್ರದ ಭಾಗವಾದ ಹಿಜಾಬ್ ಧರಿಸಿದ ಮುಸ್ಲಿಂ ಸಮುದಾಯದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ' ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

'ವಿನ್ಯಾಸ ಪ್ರಕ್ರಿಯೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದರಿಂದ ಹೊರಗಿನ ಜನರಿಗೆ ನ್ಯೂಜಿಲೆಂಡ್ ಪೊಲೀಸ್ ಸಮವಸ್ತ್ರ ಹಿಜಾಬ್ ಅನ್ನು ತೋರಿಸಲು ಸಾಧ್ಯವಾಯಿತು' ಎಂದು ಝೀನಾ ಅಭಿಪ್ರಾಯಪಟ್ಟರು.

Edited By : Nirmala Aralikatti
PublicNext

PublicNext

18/11/2020 06:20 pm

Cinque Terre

53.57 K

Cinque Terre

3

ಸಂಬಂಧಿತ ಸುದ್ದಿ