ವಾಷಿಂಗ್ಟನ್ : ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಚಿಂತಿಸುವವರ ಮಧ್ಯೆ ಇಲ್ಲೊಬ್ಬ ಮಹಾತಾಯಿ ಹೆಣ್ಣು ಮಗುವಿಗಾಗಿ ಹಂಬಲಿಸಿದ ಪರಿ ನಿಜಕ್ಕೂ ಮಾದರಿ.
ಗಂಡು ಮಗು ಬೇಕೆಂದು ಹೆಣ್ಣು ಹೆತ್ತು ಕಾಯುವುದನ್ನು ನೋಡಿದ್ದೇವೆ. ಆದರೆ ಈ ದಂಪತಿ ಹೆಣ್ಣು ಮಗುವಿಗಾಗಿ ಬರೋಬ್ಬರಿ 14 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮೂರು ದಶಕಗಳ ಬಳಿಕ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ ದಂಪತಿ ಖುಷಿಗೆ ಪಾರವೇ ಇಲ್ಲದಂತ್ತಾಗಿದೆ.
ಇಂತಹದೊಂದು ಘಟನೆ ಅಮೆರಿಕದ ಮಿಚಿಗಾನ್ ರಾಜ್ಯದಲ್ಲಿ ನಡೆದಿದ್ದು, ಕಟೇರಿ ಶ್ವಾಂಡ್ಟ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹುಟ್ಟಿದ ಸಮಯದಲ್ಲಿ 3.4 ಕೆ.ಜಿ ತೂಕವಿದ್ದ ಮ್ಯಾಗಿ ಜಯ್ನೆಯನ್ನು 14 ಸಹೋದರರು ಸ್ವಾಗತಿಸಿದ್ದಾರೆ. ಗ್ರ್ಯಾಂಡ್ ರಾಪಿಡ್ಸ್ ನ ಮರ್ಸಿ ಹೆಲ್ತ್ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಮ್ಯಾಗಿ ಜನಿಸಿದ್ದಾಳೆ.
ಕಟೇರಿ ಹಾಗೂ ಇವರ ಪತಿ ಜೇ ಇಬ್ಬರೂ 45 ವರ್ಷದವರಾಗಿದ್ದಾರೆ. ಹೆಣ್ಣು ಮಗು ಜನಿಸಿದ್ದಕ್ಕೆ ಅತೀವ ಸಂತಸಪಟ್ಟಿದ್ದಾರೆ.
ಕಟೇರಿ ಹಾಗೂ ಜೇ ಗೇಲಾರ್ಡ್ ಹೈ ಸ್ಕೂಲ್ ಹಾಗೂ ಗೇಲಾರ್ಡ್ ಸೇಂಟ್ ಮೇರಿಸ್ ಹೈ ಸ್ಕೂಲ್ ನಿಂದ ಡೇಟಿಂಗ್ ಮಾಡುತ್ತಿದ್ದರು.
1993ರಲ್ಲಿ ಇಬ್ಬರೂ ಫೇರಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ. ಪದವೀಧರರಾಗುವ ಮೊದಲೇ ಅವರಿಗೆ ಮೂವರು ಗಂಡು ಮಕ್ಕಳು ಜನಿಸಿದ್ದರು.
ಕುಟುಂಬ ಬೆಳೆಯುತ್ತಿದ್ದರೂ ದಂಪತಿ ಮಾತ್ರ ಓದನ್ನು ಮುಂದುವರಿಸಿದ್ದರು.
ಕಟೇರಿ ಅವರು ವೇಲ್ಲಿ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯದಲ್ಲಿ ಮಾಸ್ಟರ್ ಡಿಗ್ರಿ ಪೂರೈಸಿದ್ದಾರೆ.
ಇದೇ ವೇಳೆ ಜೇ ಅವರು ವೆಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದ ಥಾಮಸ್ ಎಂ ಕೂಲೆ ಲಾ ಶಾಲೆಯಲ್ಲಿ ಕಾನೂನು ಪದವಿ ಪಡೆದಿದ್ದಾರೆ, ಜೇ ವೃತ್ತಿಯಲ್ಲಿ ವಕೀಲರಾಗಿದ್ದು ಭೂ ಸಮೀಕ್ಷೆ ವ್ಯವಹಾರ ಹೊಂದಿದ್ದಾರೆ.
PublicNext
07/11/2020 01:21 pm