ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

17ರ ಯುವತಿಯನ್ನ ಮದ್ವೆಯಾಗಿ 22 ದಿನಕ್ಕೆ ವಿಚ್ಛೇದನ ನೀಡಿದ 78ರ ವೃದ್ಧ

ಜಕಾರ್ತ: 78 ವರ್ಷದ ವೃದ್ಧನೊಬ್ಬ 17ರ ಯುವತಿಯನ್ನ ಮದುವೆಯಾಗಿ ಕೇವಲ 22 ದಿನಕ್ಕೆ ವಿಚ್ಛೇದನ ನೀಡಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಅಬಾ ಸರ್ನಾ ಹಾಗೂ ನೋನಿ ನವಿತಾ ಕಳೆದ ತಿಂಗಳು ವಿವಾಹವಾಗಿದ್ದರು. ನವವಿವಾಹಿತರು ತಮ್ಮ ವಯಸ್ಸಿನ ಅಂತರದಿಂದ ಸಾಕಷ್ಟು ಗಮನ ಸೆಳೆದಿದ್ದರು. ಅವರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಈ ದಂಪತಿ ಕಳೆದ ವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಮದುವೆಯಾಗುವ ಮೊದಲು ಮಹಿಳೆ ಗರ್ಭಿಣಿಯಾಗಿದ್ದರಿಂದ ದಂಪತಿ ಬೇರೆಯಾದರು ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಆಕೆಯ ಸಹೋದರಿ ಈ ಆರೋಪವನ್ನು ತಳ್ಳಿಹಾಕಿದ್ದಾಳೆ.

Edited By : Vijay Kumar
PublicNext

PublicNext

05/11/2020 03:13 pm

Cinque Terre

50.36 K

Cinque Terre

4