ಕಾಬೂಲ್: ಅಫ್ಘಾನಿಸ್ತಾನವನ್ನು ತಾನಿಬಾನ್ ಉಗ್ರರರು ವಶಪಡಿಸಿಕೊಳ್ಳುತ್ತಿದ್ದಂತೆ ಜನ ದೇಶ ತೊರೆಯಲು ಬಸ್,ರೈಲು ಎರಿದಂತೆ ವಿಮಾನ ಎರಿದ ದೃಶ್ಯ ಮೈ ಝುಂ ಎನ್ನುವಂತ್ತಿತ್ತು. ಹೀಗೆ ಧಾವಂತದಲ್ಲಿ ಅಮೆರಿಕಾ ವಿಮಾನ ಟೇಕಾಫ್ ವೇಳೆ ಟೈರ್ ಮೇಲೆ ಹತ್ತಿ ಪಲಾಯನಕ್ಕೆ ಮುಂದಾಗಿದ್ದವರ ಪೈಕಿ ಇಬ್ಬರು ಆಗಸದ ಮಧ್ಯದಲ್ಲಿ ಕೆಳಗೆ ಬಿದ್ದು ಮೃತಪಟ್ಟಿದ್ದರು.
ವಿಮಾನದಿಂದ ಕೆಳಗೆ ಬಿದ್ದು ಮೃತಪಟ್ಟವರ ಪೈಕಿ ಓರ್ವ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ. ಹೌದು 19 ವರ್ಷದ ಝಾಕಿ ಅನ್ವಾರಿ ಆಟಗಾರ ದುರಂತ ಅಂತ್ಯ ಕಂಡಿದ್ದಾನೆ. ಅನ್ವರಿ ಸಾವನ್ನು ಅಫ್ಘಾನಿಸ್ತಾನದ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಜನರಲ್ ಡೈರೆಕ್ಟರೇಟ್ ದೃಢಪಡಿಸಿದೆ.
16 ವರ್ಷದವನಿದ್ದಾಗಿನಿಂದ ಅನ್ವರಿ ಅಫ್ಘಾನ್ ರಾಷ್ಟ್ರೀಯ ಯುವ ತಂಡದಲ್ಲಿ ಆಡುತ್ತಿದ್ದು ಗೆಳೆಯರು ಮತ್ತು ತರಬೇತುದಾರರಿಗೆ ಪ್ರೀತಿಪಾತ್ರರಾಗಿದ್ದನು.
PublicNext
19/08/2021 06:15 pm