ಮಾಸ್ಕೋ: ರಷ್ಯಾ ಸೇನಾ ಸಾರಿಗೆ ವಿಮಾನವು ಆಗಸದಲ್ಲಿ ಹೊತ್ತಿ ಉರಿದ ಘಟನೆ ಇಂದು ರಷ್ಯಾ ರಾಜಧಾನಿ ಮಾಸ್ಕೋದ ಹೊರ ಪ್ರದೇಶದಲ್ಲಿ ನಡೆದಿದೆ.
ವಿಮಾನವು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನೂತನ ಲಘು ಮಿಲಿಟರಿ ಸಾರಿಗೆ ವಿಮಾನ Russian Il-112V, ಮಾಸ್ಕೋದಿಂದ ಪಶ್ಚಿಮಕ್ಕೆ 45 ಕಿಲೋಮೀಟರ್ ದೂರದಲ್ಲಿರುವ ಕುಬಿಂಕಾ ವಾಯುನೆಲೆಯಲ್ಲಿ ಲ್ಯಾಂಡ್ ಆಗುತ್ತಿತ್ತು. ಈ ವೇಳೆ ವಿಮಾನದ ರೆಕ್ಕೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಈಡಿ ವಿಮಾನಕ್ಕೆ ವ್ಯಾಪಿಸಿದೆ. ಇದರಿಂದಾಗಿ ವಿಮಾನವು ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ ಎಂದು ರಷ್ಯಾದ ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೋರೇಶನ್‌ನ ವಕ್ತಾರರು ತಿಳಿಸಿದ್ದಾಗಿ ವರದಿಯಾಗಿದೆ.
PublicNext
17/08/2021 05:13 pm