ಮೆಕ್ಸಿಕೋದ ಮಧ್ಯಭಾಗದಲ್ಲಿರುವ ಸ್ಟೀಲ್ ಪ್ಲಾಂಟ್‌ನಲ್ಲಿ ತಡರಾತ್ರಿ ಸಂಭವಿಸಿದ ಸ್ಪೋಟಕ್ಕೆ ಭಾರಿ ಬೆಂಕಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ.
ಮೆಕ್ಸಿಕೋ ನಗರದ ಪೂರ್ವಕ್ಕೆ 140 ಕಿಮೀ ದೂರದಲ್ಲಿರುವ Xaloztoc ನಲ್ಲಿ ಘಟನೆ ನಡೆದಿದೆ ಎಂದು Tlaxcala ರಾಜ್ಯ ಸಿವಿಲ್ ಪ್ರೊಟೆಕ್ಷನ್ ಹೇಳಿದೆ.
ಕಾರ್ಮಿಕರ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ, ಕರಗಿದ ಉಕ್ಕು ನೀರಿನ ಸಂಪರ್ಕಕ್ಕೆ ಬಂದಾಗ ಸ್ಫೋಟ ಸಂಭವಿಸಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ. ಇನ್ನು Tlaxcala ಗವರ್ನರ್ Lorena Cuellar ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
PublicNext
31/10/2024 07:25 am