", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/52563-1737724525-Untitled-design-(48).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಾಷಿಂಗ್ಟನ್: ಹಿಂಸೆ, ಕಳ್ಳತನ ಸೇರಿದಂತೆ ಇತರ ಅಪರಾಧಗಳ ಆರೋಪಗಳನ್ನು ಎದುರಿಸುತ್ತಿರುವ ಅಕ್ರಮ ವಲಸಿಗರನ್ನು ಬಂಧಿಸುವ ಕುರಿತ ಮಸೂದೆಗೆ ಅಮೆರಿಕದ ...Read more" } ", "keywords": "Trump's border operation begins, aiming to apprehend and deport undocumented immigrant,,International", "url": "https://publicnext.com/article/nid/International" }
ವಾಷಿಂಗ್ಟನ್: ಹಿಂಸೆ, ಕಳ್ಳತನ ಸೇರಿದಂತೆ ಇತರ ಅಪರಾಧಗಳ ಆರೋಪಗಳನ್ನು ಎದುರಿಸುತ್ತಿರುವ ಅಕ್ರಮ ವಲಸಿಗರನ್ನು ಬಂಧಿಸುವ ಕುರಿತ ಮಸೂದೆಗೆ ಅಮೆರಿಕದ ಸಂಸತ್ತು ಬುಧವಾರ ಅಂತಿಮ ಅನುಮೋದನೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭರವಸೆಯ ಸಾಮೂಹಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಟ್ರಂಪ್ ಆಡಳಿತವು ಗುರುವಾರ "538 ಅಕ್ರಮ ವಲಸೆ ಅಪರಾಧಿಗಳನ್ನು ಬಂಧಿಸಿದೆ" ಮತ್ತು "ನೂರಾರು" ಜನರನ್ನು ಮಿಲಿಟರಿ ವಿಮಾನಗಳ ಮೂಲಕ ಗಡಿಪಾರು ಮಾಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಹೇಳಿದ್ದಾರೆ.
"ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಕಾರ್ಯಾಚರಣೆ ನಡೆಯುತ್ತಿದೆ' ಎಂದು ಕ್ಯಾರೋಲಿನ್ ಲೀವಿಟ್ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗುರುವಾರ, ನ್ಯೂಜೆರ್ಸಿಯ ನ್ಯೂವಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ರಾಸ್ ಬರಾಕಾ ಅವರು, ವಲಸೆ ಮತ್ತು ಕಸ್ಟಮ್ಸ್ ಜಾರಿ(ICE) ಏಜೆಂಟ್‌ಗಳು "ಸ್ಥಳೀಯ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ. ದಾಖಲೆರಹಿತ ನಿವಾಸಿಗಳು ಮತ್ತು ನಾಗರಿಕರನ್ನು ವಾರಂಟ್ ನೀಡದೆ ಬಂಧಿಸಿದ್ದಾರೆ" ಎಂದು ಹೇಳಿದ್ದಾರೆ. ಅಲ್ಲದೆ ದಾಳಿಯ ಸಮಯದಲ್ಲಿ ಬಂಧಿಸಲ್ಪಟ್ಟವರಲ್ಲಿ ಒಬ್ಬರು ಯುಎಸ್ ಮಿಲಿಟರಿ ಮಾಜಿ ಅಧಿಕಾರಿ ಎಂದು ಬರಾಕಾ ತಿಳಿಸಿದ್ದಾರೆ.
PublicNext
24/01/2025 06:46 pm