", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/52563-1738752939-b14f6999-1120-409c-8f4e-7c433925de49.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಒಂದಾದ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಭರದಿಂದ ಸಾಗಿದೆ. ಇಂದು ಅ...Read more" } ", "keywords": "US plane carrying illegal Indian immigrants lands in Punjab,,International", "url": "https://publicnext.com/node" } ಅಮೆರಿಕಾದಿಂದ ಭಾರತೀಯ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪಂಜಾಬ್‌ನಲ್ಲಿ ಲ್ಯಾಂಡ್‌ : ಭಾರತಕ್ಕೆ ಬಂದ್ರು 104 ಮಂದಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕಾದಿಂದ ಭಾರತೀಯ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪಂಜಾಬ್‌ನಲ್ಲಿ ಲ್ಯಾಂಡ್‌ : ಭಾರತಕ್ಕೆ ಬಂದ್ರು 104 ಮಂದಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಒಂದಾದ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಭರದಿಂದ ಸಾಗಿದೆ. ಇಂದು ಅಮೆರಿಕಾದಿಂದ ಗಡಿಪಾರು ಮಾಡಲಾದ ಭಾರತದ 104 ಅಕ್ರಮ ವಲಸಿಗರು ಭಾರತದಲ್ಲಿ ಲ್ಯಾಂಡ್ ಆಗಿದ್ದಾರೆ.

ಉದ್ಯೋಗದ ಆಸೆ, ಉಜ್ವಲ ಭವಿಷ್ಯಕ್ಕಾಗಿ ಭಾರತದ ಲಕ್ಷಗಟ್ಟಲೇ ನಾಗರಿಕರು ಅಕ್ರಮ ಮಾರ್ಗದ ಮೂಲಕ ಅಮೆರಿಕಾವನ್ನು ಪ್ರವೇಶ ಮಾಡಿದ್ದಾರೆ. ಪ್ರಧಾನಿ ಮೋದಿ ಅಮೆರಿಕಾ ಭೇಟಿಗೂ ಮುನ್ನ ಯಾವುದೇ ಮುಲಾಜಿಲ್ಲದೇ, ಅಕ್ರಮ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ.

ಅಮೆರಿಕಾ ಸೇನೆಯು ಅಕ್ರಮ ವಲಸಿಗರ ಸಿ-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ಭಾರತಕ್ಕೆ ಹಸ್ತಾಂತರ ಮಾಡಿದೆ. ಅಮೆರಿಕಾದ ಸೇನಾ ವಿಮಾನ ಇಂದು ಅಮೃತಸರದಲ್ಲಿ ಲ್ಯಾಂಡ್ ಆಗಿದ್ದು, 104 ಅಕ್ರಮ ವಲಸಿಗರನ್ನು ಭಾರತದ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಯಾವ, ಯಾವ ರಾಜ್ಯದವರು?

ಗುಜರಾತ್ 33 ಪಂಜಾಬ್ 30 ಹರಿಯಾಣ 33 ಯುಪಿ 3 ಮಹಾರಾಷ್ಟ್ರ 3 ಚಂಡೀಗಢ 2 ಭಾರತ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಗುಜರಾತ್, ಪಂಜಾಬ್, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯದ ನಾಗರಿಕರನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಗುಜರಾತ್ 33, ಪಂಜಾಬ್ 30, ಹರಿಯಾಣ 33, ಮಹಾರಾಷ್ಟ್ರ 3, ಯುಪಿ 3, ಚಂಡೀಗಢದ ಇಬ್ಬರಿಗೆ ಅಮೆರಿಕಾದಿಂದ ಗೇಟ್​ ಪಾಸ್​​ ನೀಡಲಾಗಿದೆ.

ಅಕ್ರಮ ವಲಸಿಗರಲ್ಲಿ 79 ಮಂದಿ ಪುರುಷರು, 25 ಮಹಿಳೆಯರು, 13 ಮಕ್ಕಳು ಭಾರತಕ್ಕೆ ಗಡಿಪಾರು ಆಗಿದ್ದಾರೆ. ಅಮೆರಿಕಾ ವಿಮಾನದ ಮೂಲಕ ಅಮೃತಸರಕ್ಕೆ 104 ಮಂದಿ ವಲಸಿಗರು ಶಿಫ್ಟ್​ ಆಗಿದ್ದು, ಅಮೃತಸರದಿಂದ ಅವರವರ ರಾಜ್ಯಗಳಿಗೆ ವಲಸಿಗರನ್ನು ರವಾನೆ​​ ಮಾಡಲಾಗುತ್ತಿದೆ.

Edited By : Nirmala Aralikatti
PublicNext

PublicNext

05/02/2025 04:25 pm

Cinque Terre

19.31 K

Cinque Terre

6

ಸಂಬಂಧಿತ ಸುದ್ದಿ