ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಸತತ 3ನೇ ಬಾರಿ ರಾಜಾ ಕೃಷ್ಣಮೂರ್ತಿ ಆಯ್ಕೆ

ವಾಷಿಂಗ್ಟನ್: ಭಾರತೀಯ ಮೂಲದ ಡೆಮಾಕ್ರೆಟಿಕ್ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ಅವರು ಅಮೆರಿಕಾದ ಪ್ರತಿನಿಧಿ ಸಭೆಗೆ ಸತತ ಮೂರನೇ ಬಾರಿ (ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಮರು ಆಯ್ಕೆಯಾಗಿದ್ದಾರೆ.

ನವದೆಹಲಿಯಲ್ಲಿ ಜನಿಸಿದ ಕೃಷ್ಣಮೂರ್ತಿ, ತಮ್ಮ ಪ್ರತಿಸ್ಪರ್ಧಿ ಪ್ರೆಸ್ಟೆನ್ ನೆಲ್ಸನ್ ಅವರನ್ನು ಸುಲಭವಾಗಿ ಮಣಿಸಿದ್ದಾರೆ.

ಲಭ್ಯ ವರದಿ ಪ್ರಕಾರ, ಕೃಷ್ಣಮೂರ್ತಿ ಅವರು ಶೇ 71 ರಷ್ಟು ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕೃಷ್ಣಮೂರ್ತಿ ಅವರ ಪೋಷಕರು ತಮಿಳುನಾಡು ಮೂಲದವರು.

ಇನ್ನು ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ ಎರಡೂ ರಾಜ್ಯಗಳ ಫಲಿತಾಂಶ ಶೀಘ್ರದಲ್ಲಿಯೇ ಘೋಷಣೆಯಾಗುವ ಸಾಧ್ಯತೆ ಇದೆ.

Edited By : Nirmala Aralikatti
PublicNext

PublicNext

04/11/2020 01:47 pm

Cinque Terre

24.49 K

Cinque Terre

2

ಸಂಬಂಧಿತ ಸುದ್ದಿ