ಬೀಜಿಂಗ್ : ಯುದ್ಧದ ಸಿದ್ದತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.
ಕಡಲ ತೀರದ ತೀರದ ಕಾರ್ಪ್ಸ್ ಕಮಾಂಡರ್ಸ್ ಜೊತೆಗಿನ ಸಂವಾದದ ವೇಳೆಯಲ್ಲಿ ಕ್ಸಿ- ಜಿನ್ ಪಿಂಗ್ ಈ ರೀತಿಯ ಹೇಳಿಕೆ ನೀಡಿದ್ದು, ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚು ವಾಸ್ತವಿಕ ಯುದ್ಧ ತರಬೇತಿಯನ್ನು ಕೈಗೊಳ್ಳಬೇಕು ಮತ್ತು ಯುದ್ಧ ಸಿದ್ಧಾಂತಗಳು, ತರಬೇತಿ ವಿಧಾನಗಳು ಮತ್ತು ಕಾರ್ಯ ಯೋಜನೆಗಳ ವಿಷಯದಲ್ಲಿ ಹೊಸತನವನ್ನು ಸಾಧಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಚೀನಾದೊಂದಿಗೆ ಗಡಿ ವಿವಾದ ಇರುವ ಭಾರತಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬುಧವಾರ ಸಮುದ್ರ ತೀರದ- ಮರೀನ್ ಕಾರ್ಪ್ಸ್ ಕೇಂದ್ರ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಕ್ಸಿ- ಜಿನ್ ಪಿಂಗ್, ಚೀನಾದ ಸಾಗರೋತ್ತರ ಹಿತಾಸಕ್ತಿ ಮತ್ತು ಕಡಲ ತೀರದ ಮೇಲಿನ ಹಕ್ಕುಗಳು ಹಾಗೂ ದೇಶದ ಭದ್ರತೆ ಮತ್ತು ಏಕತೆಯನ್ನು ರಕ್ಷಿಸುವ ಮಹತ್ವದ ಹೊಣೆಗಾರಿಕೆ ಕಡಲ ತೀರದ ಸೇನೆಯ ಆದ್ಯತೆ ಎಂದಿದ್ದಾರೆ.
PublicNext
15/10/2020 07:50 am