ವಿಶ್ಲೇಷಣೆ-- ಪ್ರವೀಣ್ ನಾರಾಯಣ ರಾವ್
ಬೆಂಗಳೂರು: ಒಂದು ಕಡೆ ಬೊಮ್ಮಾಯಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ, ನಿಗಮಮಂಡಳಿಗಳ ಅಧ್ಯಕ್ಷರ ನೇಮಕ ಗಗನ ಕುಸುಮವಾಗಿರುವ ಬೆನ್ನಲ್ಲೇ 8 ನಿಗಮಗಳು ಹಾಗೂ 4 ಪ್ರಾಧಿಕಾರಗಳ ಅಧ್ಯಕ್ಷರ ಅವಧಿ ಇವತ್ತಿಗೆ ಮುಕ್ತಾಯವಾಗುತ್ತಿದ್ದು ಈ ಸ್ಥಾನಗಳಿಗೆ ಹೊಸಬರನ್ನ ನೇಮಕ ಮಾಡುವುದೋ ಅಥವಾ ಹಳಬರನ್ನೇ ಮುಂದುವರೆಸುವುದೋ ಎಂಬ ವಿಚಾರದಲ್ಲಿ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿದಂತೆ ಆಗಿದೆ..
ಕನ್ನಡ ಸಂಸ್ಕೃತಿ ಇಲಾಖೆಯಡಿ ಬರುವ ಈ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಹೊಸಬರನ್ನ ನೇಮಕ ಮಾಡುವ ಕುರಿತಂತೆ ಸಚಿವ ಸುನಿಲ್ ಕುಮಾರ್ ಅವರು ಈಗಾಗಲೇ ಒಂದು ಪಟ್ಟಿಯನ್ನು ಕೊಟ್ಟಿದ್ದು ಇನ್ನೊಂದು ಪಟ್ಟಿಯನ್ನು ಆರ್ ಎಸ್ ಎಸ್ ಕೊಟ್ಟಿದೆ..
ಈ ಎರಡೂ ಪಟ್ಟಿಗಳೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಟೇಬಲ್ ಮೇಲೆ ಇದೆ.. ಮುಖ್ಯಮಂತ್ರಿಗಳು ಇದಕ್ಕೆ ಅಂಕಿತ ಅಪ್ರೂವಲ್ ಕೊಡಬೇಕಿದೆ.. ಆದರೆ ಸಿಎಂ ಸದ್ಯ ಬೆಂಗಳೂರಿನಲ್ಲಿ ಇಲ್ಲದೇ ಇರುವುದರಿಂದ ಮುಖ್ಯಕಾರ್ಯದರ್ಶಿಗಳು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅನ್ನುವುದು ಅತ್ಯಂತ ಕುತೂಹಲ ಕೆರಳಿಸಿದೆ...
PublicNext
13/10/2022 08:52 pm