ಕಾರವಾರ: ತಾಲೂಕಿನ ಮಾಜಾಳಿ ಗ್ರಾಮದಲ್ಲಿ ಸುಮಾರು 250 ಕೋಟಿ ವೆಚ್ಚದಲ್ಲಿ ಬೃಹತ್ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮುಂದಾಗಿದ್ದು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಘೋಷಣೆ ಮಾಡಿದ್ದರು. ಇದೀಗ ಬಂದರಿನ ನೀಲನಕ್ಷೆಯ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ.
ಕಾರವಾರದ ಮಾಜಾಳಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಮತ್ಸ್ಯ ಸಂಪದ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದರು. ಇದೀಗ ಆಕ್ಟಸ್ ಎಂಬ ಕಂಪನಿಯ ಕಡೆಯಿಂದ ಬಂದರಿನ ನೀಲನಕ್ಷೆಯ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ವಿಡಿಯೋದಲ್ಲಿ ಬಂದರಿಗೆ ಪ್ರವೇಶ ದ್ವಾರ ಮತ್ತು ಭದ್ರತಾ ಕ್ಯಾಬಿನ್, 595 ಮೀ. ಬ್ರೇಕ್ ವಾಟರ್, ಬಂದರಿನ ಒಳಭಾಗದಲ್ಲಿ ದ್ವಿಪಥ ರಸ್ತೆ, ಪಾರ್ಕಿಂಗ್ ವ್ಯವಸ್ಥೆ, ಬೋಟ್ ಗಳ ನಿಲುಗಡೆ ತಾಣ, ರಿಪೇರ್ ಯಾರ್ಡ್, ಇಂಧನ ಭರ್ತಿ ಸ್ಟೇಶನ್, ರೆಸ್ಟೊರೆಂಟ್, ಇತರ ಅಂಗಡಿಗಳಿಗೂ ಸ್ಥಳಾವಕಾಶಗಳನ್ನ ತೋರಿಸಲಾಗಿದೆ.
PublicNext
06/09/2022 02:27 pm