ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಕಿತ್ತು ಬರುತ್ತೆ ರಸ್ತೆಯ ಡಾಂಬರ್, ಕಳಪೆ ಕಾಮಗಾರಿ ಆರೋಪ

ವರದಿ: ಸಂತೋಷ ಬಡಕಂಬಿ

ಅಥಣಿ: ಕಾಗವಾಡ ತಾಲೂಕಿನ ಐನಾಪೂರ ಶೇಡಬಾಳ ರಸ್ತೆಯ ಕಾಮಗಾರಿ ಪೂರ್ಣಗೊಂಡು 20 ದಿನಗಳಷ್ಟೇ ಕಳೆದಿದೆ. ಆದರೆ ಕಾಮಗಾರಿ ಕಳಪೆಯಿಂದಾಗಿ ಕೈನಿಂದ ಅಗೆದರೂ ಡಾಂಬರ್ ಕಿತ್ತು ಬರುತ್ತಿದೆ ಎಂದು ಸ್ಥಳೀಯರು ಕಳಪೆ ಕಾಮಗಾರಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಐನಾಪೂರ ಪಟ್ಟಣ ವ್ಯಾಪ್ತಿಯ ಐನಾಪೂರ-ಶೇಡಬಾಳ ಹಳೆ ರಸ್ತೆ ನಿರ್ಮಾಣಕ್ಕೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು 1.5 ಕಿ.ಮೀ ಉದ್ದದ ರಸ್ತೆಗೆ ಕರ್ನಾಟಕ ನೀರಾವರಿ ನಿಗಮದ ಅನುದಾನದಲ್ಲಿ ಮಂಜೂರು ಮಾಡಿಸಿದ್ದರು. ಅದರ ಕಾಮಗಾರಿ ಪೂರ್ಣಗೊಂಡ 20 ದಿನಗಳಲ್ಲಿಯೇ ರಸ್ತೆ ಕಳಪೆಯಾಗಿ ಡಾಂಬರೀಕರಣ ಕೀಳುತ್ತಿದ್ದು ಇಲ್ಲಿನ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಐನಾಪೂರ ಪಟ್ಟಣದ ನಿವಾಸಿ ಸಂಜಯ ಕುಸುನಾಳೆ ಮಾತನಾಡಿ, ಇಲ್ಲಿನ ರಸ್ತೆ ಸುಧಾರಣೆ ಆಗುವುದಕ್ಕೆ ಹಲವು ವರ್ಷ ತೆಗೆದುಕೊಂಡು ಅದು ಈಗ ನೆರವೇರುತ್ತಿದೆ. ಅದು ಕೂಡಾ ತೀರಾ ಕಳಪೆ ಮಟ್ಟದಿಂದ ನಿರ್ಮಾಣವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಂಡ ಸರಿಯಾದ ರಸ್ತೆ ಮಾಡಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು‌.

ಕಾಗವಾಡ ತಾಲೂಕಿನಲ್ಲಿ ಪದೇ ಪದೇ ಇಂತಹ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಕೂಡ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲಾ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

Edited By : Shivu K
PublicNext

PublicNext

21/07/2022 12:29 pm

Cinque Terre

57.9 K

Cinque Terre

3