ಪುತ್ತೂರು: ಬೀಡಿ ಕಾರ್ಮಿಕರ ಶೋಷಣೆ ನಿಲ್ಲಿಸಬೇಕು. ಸರಕಾರ ನಿಗದಿಗೊಳಿಸಿದ ಕನಿಷ್ಠ ವೇತನ ಜಾರಿಯಾಗಬೇಕು, ಬಾಕಿ ವೇತನ ಪಾವತಿ ಮಾಡಬೇಕು ಸೇರಿಸಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲೂಕು ಬೀಡಿ ಕಾರ್ಮಿಕರ ಸಂಘದಿಂದ ನೆಹರುನಗರದ ಸೌತ್ ಕೆನರಾ ಬೀಡಿ ಇಂಡಸ್ಟ್ರೀಸ್ ಎದುರು ಪ್ರತಿಭಟನೆ ನಡೆಯಿತು.
ಬೇಡಿಕೆ ಈಡೇರಿಕೆ ಕುರಿತು ಭರವಸೆ ನೀಡುವಂತೆ ಬೀಡಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಬೀಡಿ ಕಂಪನಿಯವರು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದ ಘಟನೆ ಎ.21 ರಂದು ನಡೆಯಿತು.
ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಮ್ ಭಟ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಬೀಡಿ ಕೈಗಾರಿಕೆಯನ್ನು ಜಿಲ್ಲೆಯಲ್ಲಿ ಬಲಿಷ್ಟವಾಗಿ ಕಟ್ಟಿ ಬೆಳೆಸಿದ ಬೀಡಿ ಕಾರ್ಮಿಕರ ಬಗ್ಗೆ ಇಂದು ಸರಕಾರಕ್ಕೂ, ಮಾಲಕರಿಗೂ ಕಾಳಜಿ ಇಲ್ಲವಾಗಿದೆ.
PublicNext
21/04/2022 03:33 pm