ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿಐನ ವಾಯ್ಸ್ ಆಫ್ ದಿ ಕಸ್ಟಮರ್ ಮಾನ್ಯತೆ

ದೇವನಹಳ್ಳಿ: ಕೋವಿಡ್-19 ಸಮಯದಲ್ಲಿ ಪ್ರಯಾಣಿಕರ ಅಗತ್ಯಗಳನ್ನ ಅರ್ಥ ಮಾಡಿಕೊಂಡು ಮತ್ತು ಉತ್ತಮ ಸೇವೆಯನ್ನು ನೀಡಿದ ಕಾರಣಕ್ಕೆ ಎಸಿಐನ ವಾಯ್ಸ್ ಆಫ್ ದಿ ಕಸ್ಟಮರ್ ಮಾನ್ಯತೆ ಪಡೆದಿರುವ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಪಾತ್ರವಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಸಿಐನ ಏರ್‌ಪೋರ್ಟ್ ಸರ್ವೀಸ್ ಕ್ವಾಲಿಟಿ (ಎಎಸ್‌ಕ್ಯೂ) ಕಾರ್ಯಕ್ರಮದಲ್ಲಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಉತ್ತಮ ಸಾಧನೆ ಮಾಡಿದೆ.

ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡಿದೆ. ಇದರಿಂದ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ACI)ವಾಯ್ಸ್ ಆಫ್ ದಿ ಕಸ್ಟಮರ್ ಜಾಗತಿಕ ಮನ್ನಣೆ ಪಡೆದಿದೆ.

ಕೆಐಎಎಲ್ ಸತತವಾಗಿ ಎರಡನೆಯ ವರ್ಷವೂ ಎಸಿಐನ ವಾಯ್ಸ್ ಆಫ್ ದಿ ಕಸ್ಟಮರ್ ಮಾನ್ಯತೆ ಪಡೆದಿರುವ ಬಗ್ಗೆ ಬಿಐಎಎಲ್ ನ ಎಂಡಿ ಶ್ರೀ ಹರಿ ಮರಾರ್ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಸಿಬ್ಬಂದಿಯ ಕಠಿಣ ಪರಿಶ್ರಮದಿಂದ ಈ ಗೌರವ ಸಿಕ್ಕಿದೆ. ಮುಂದೆಯು ಪ್ರಯಾಣಿಕರ ಸೇವೆಯನ್ನು ಉತ್ತಮ ಪಡಿಸಲು ಉತ್ತೇಜನಕಾರಿಯಾಗಿದೆ ಎಂದರು.

Edited By :
PublicNext

PublicNext

17/02/2022 11:04 pm

Cinque Terre

56.01 K

Cinque Terre

0

ಸಂಬಂಧಿತ ಸುದ್ದಿ