ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಓಡಾಡಲು ಸರಿಯಾದ ರಸ್ತೆಯಿಲ್ಲ... ಕುಡಿಯಲು ನೀರಿಲ್ಲ: ಲಕ್ಷ್ಮೇಶ್ವರ ಜನರ ಗೋಳು ಹೇಳ ತೀರದು...!

ಗದಗ: ಮುದ್ರಣಕಾಶಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಾರ್ವಜನಿಕರಿಗೆ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಇದೆ. ಒಂದು ಕಡೆಗೆ ರಸ್ತೆಯ ಅವ್ಯವಸ್ಥೆ ಆದರೆ ಮತ್ತೊಂದು ಕಡೆಯಲ್ಲಿ ನೀರಿನ ಹಾಹಾಕಾರ...

ಲಕ್ಷ್ಮೇಶ್ವರ ಪಟ್ಟಣದ ನಾಲ್ಕನೇ ವಾರ್ಡನಲ್ಲಿ ರಸ್ತೆಗಳು ದುರಸ್ಥಿಯಿಲ್ಲದೇ ಹಾಳಾಗಿದ್ದು, ಮತ್ತು ನೀರಿನ ಹಾಹಾಕಾರ ಎದ್ದು ಕಾಣುತ್ತಿದೆ. ಲಕ್ಷ್ಮೇಶ್ವರ ಪಟ್ಟಣದ ಪುರಸಭೆಗೆ ಸಂಬಂಧಿಸಿದ ಈ ವಾರ್ಡನಲ್ಲಿ ಒಂದು ಸಾವಿರ ಮತದಾರರಿದ್ದು, 1500 ಜನಸಂಖ್ಯೆ ಇದೆ. ಆದರೆ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ಮರೆಯಾಗಿ ಹೋಗಿವೆ.

ಸರಿಯಾದ ರಸ್ತೆ, ಕುಡಿಯಲು ಶುದ್ಧ ನೀರು ಇತ್ಯಾದಿ ಅಗತ್ಯ ಸೌಲಭ್ಯಗಳಿಲ್ಲದೆ ಜನರು ಬಸವಳಿದು ಹೋಗಿದ್ದಾರೆ. ಒಂದು ಕಚ್ಚಾ ರಸ್ತೆಯಿದ್ದು, ಕಲ್ಲನ್ನು ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಆದ್ದರಿಂದ ಅಲ್ಲಿ ಚಿಕ್ಕಮಕ್ಕಳು, ವಯಸ್ಕರು ಬಿದ್ದು ಗಾಯಗೊಂಡಿದ್ದಾರೆ. ಆದರೂ ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಒಟ್ಟಿನಲ್ಲಿ ಕುಡಿಯುವ ನೀರು ಇಲ್ಲದೇ ಓಡಾಡಲು ರಸ್ತೆಯಿಲ್ಲದೇ ಇಲ್ಲಿನ ಜನರು ದಿನವೂ ನರಕಯಾತನೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

Edited By : Manjunath H D
PublicNext

PublicNext

09/12/2021 03:55 pm

Cinque Terre

33.23 K

Cinque Terre

0

ಸಂಬಂಧಿತ ಸುದ್ದಿ