ನವದೆಹಲಿ: ಅಮೆರಿಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಡ್ರೈವರ್ ಲೆಸ್ ವಾಹನದ ಪ್ರಯೋಗ ನಡೆಯುತ್ತಿದೆ. ಈ ಡ್ರೈವರ್ ಲೆಸ್ ವಾಹನಕ್ಕೆ ಪೈಪೋಟಿ ನೀಡಬಲ್ಲ ಬೈಕ್ ಭಾರತದಲ್ಲಿ ಪತ್ತೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಆನಂದ್ ಮಹೀಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಟೆಸ್ಲಾ ಸಂಸ್ಥೆ ಡ್ರೈವರ್ ಲೆಸ್ ಕಾರನ್ನು ತಯಾರಿಸಿದೆ. ಅದೇ ರೀತಿ ಡ್ರೈವರ್ ಲೆಸ್ ಬೈಕಿನ ಬಗ್ಗೆ ನೀವು ಯೋಚಿಸುತ್ತಿದ್ದರೆ, ಇಲ್ಲಿ ನೋಡಿ ವ್ಯಕ್ತಿಯೊಬ್ಬ ಬೈಕಿನ ಹಿಂದಿನ ಸೀಟಿನಲ್ಲಿ ಒಂದೇ ಕಡೆ ಎರಡೂ ಕಾಲುಗಳನ್ನು ಹಾಕಿ ಕುಳಿತಿದ್ದಾನೆ. ಆ ಬೈಕ್ ತನ್ನಿಂತಾನಾಗೇ ಚಲಿಸಿಕೊಂಡು ಹೋಗುತ್ತಿದೆ. ಪಕ್ಕದಲ್ಲಿ ಚಲಿಸುತ್ತಿದ್ದ ಇನ್ನೊಂದು ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
“ಈ ಮ್ಯಾಜಿಕ್ ಹೇಗೆ ಸಾಧ್ಯ? ಗಾಡಿಯನ್ನು ಯಾರು ಚಲಿಸುತ್ತಿದ್ದಾರೆ? ದೇವರಾ?’ ಎಂದು ವಿಡಿಯೋ ಮಾಡುವ ವ್ಯಕ್ತಿ ಪ್ರಶ್ನಿಸಿದ್ದಾನೆ. ಅದಕ್ಕೆ ಆ ಡ್ರೈವರ್ ಲೆಸ್ ಬೈಕ್ ನಲ್ಲಿದ್ದ ವ್ಯಕ್ತಿ, ನಗುತ್ತಾ ಹೌದೆನ್ನುವಂತೆ ಸನ್ನೆ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸಕ್ಕತ್ ವೈರಲ್ ಆಗಿದೆ.
PublicNext
20/10/2021 10:57 pm