ಬೆಂಗಳೂರು: ನಗರದ ರಸ್ತೆಗಳು ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹಾಳಾಗಿವೆ. ಅಷ್ಟೇ ಅಲ್ಲ. ಬಿಎಂಟಿಸಿಯಲ್ಲಿರುವ ಹಳೆಯ ಬಸ್ ಗಳು ಕೂಡ ಆಗಾಗ ಕೈ ಕೊಡುತ್ತಿವೆ. ಇದಕ್ಕೆ ಈ ವಿಡಿಯೋ ಸಾಕ್ಷಿ.
ಬೆಂಗಳೂರಿನ ಶಿವಾಜಿನಗರದ ಬಿಎಂಟಿಸಿ ಬಸ್ಸೊಂದು ಇದ್ದಕ್ಕಿದ್ದಂತೆ ಕೈಕೊಟ್ಟು ನಿಂತಿದೆ. ಆಗ ಅಲ್ಲಿದ್ದ ಟ್ರಾಫಿಕ್ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಬಸ್ಸನ್ನು ತಳ್ಳುವ ಮೂಲಕ ಸ್ಟಾರ್ಟ್ ಮಾಡಲು ನೆರವಾಗಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಇಂತಹ ಡಕೋಟಾ ಬಸ್ಸನ್ನು ಯಾಕ್ರಪ್ಪ ಇನ್ನೂ ಓಡಿಸ್ತೀರಿ? ಎಂದು ಪ್ರಶ್ನೆ ಮಾಡ್ತಿದ್ದಾರೆ.
PublicNext
24/09/2021 01:52 pm