ಧಾರವಾಡ: ಸೆಪ್ಟಂಬರ್ 9 ರಿಂದ ಹತ್ತು ದಿನಗಳ ಕಾಲ ದೇಶದಾದ್ಯಂತ ಜೈನ ಮುನಿಗಳಿಂದ ದಶಲಕ್ಷಣ ಮಹಾಪರ್ವ ಕಾರ್ಯಕ್ರಮ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಎಲ್ಲರೂ ಹತ್ತು ದಿನಗಳ ಕಾಲ ಮಾಂಸಾಹಾರ ತ್ಯೆಜಿಸಬೇಕು ಅಲ್ಲದೇ ಹತ್ತು ದಿನಗಳ ಕಾಲ ಎಲ್ಲ ಕಸಾಯಿ ಖಾನೆಗಳನ್ನು ಬಂದ್ ಮಾಡಬೇಕು ಎಂದು ಜೈನ ಮುನಿ ಪ್ರಸಂಗ ಸಾಗರ ಮಹಾರಾಜರು ಹೇಳಿದರು.
ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಂಸಾಹಾರದಲ್ಲಿ ಶಕ್ತಿ ಇಲ್ಲ. ಶಾಖಾಹಾರದಲ್ಲಿ ಶಕ್ತಿ ಇದೆ. ನಾವು ಇನ್ನೊಬ್ಬರಿಗೆ ಜೀವ ಕೊಡಬೇಕು. ಜೀವ ತೆಗೆಯುವ ಅಧಿಕಾರ ನಮಗಿಲ್ಲ. ದಶಲಕ್ಷ ಮಹಾಪರ್ವದ ಅಂಗವಾಗಿ ದೆಹಲಿ, ಮುಂಬೈ, ಗುಜರಾತ್‌ನಲ್ಲಿ ಮಾಂಸಾಹರದ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ ಎಂದರು.
ಹತ್ತು ದಿನ ಎಲ್ಲರೂ ಮಾಂಸಾಹಾರ ತ್ಯೆಜಿಸಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಮಹಾಪರ್ವದ ಅಂಗವಾಗಿ ಕಸಾಯಿ ಖಾನೆ, ಮಾಂಸಾಹಾರದ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಬಂದ್ ಮಾಡುವಂತೆ ಸರ್ಕಾರಕ್ಕೆ ಕೇಳುತ್ತಿದ್ದೇವೆ ಎಂದರು.
ಸೆ.9 ರಿಂದ 20ರವರೆಗೆ ದಶಲಕ್ಷಣ ಮಹಾಪರ್ವ ಇರುತ್ತದೆ. ಭಾರತದ ಅನೇಕ ಕಡೆಗಳಲ್ಲಿ ಈ ಕಾರ್ಯಕ್ರಮದ ಅಂಗವಾಗಿ ಮಾಂಸಾಹಾರ ಬಂದ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಬಂದ್ ಮಾಡುವಂತೆ ಜೈನ ಧರ್ಮದ ಪರವಾಗಿ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದರು.
PublicNext
09/09/2021 02:09 pm