ಬಾಂಗ್ಲಾದೇಶದ ‘ಬಿಮನ್ ಏರ್ ಲೈನ್ಸ್’ನ ವಿಮಾನವೊಂದು ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಸುಮಾರು 11 ಗಂಟೆಗಳ ನಂತರ ಪುನಂ ಸಂಚಾರ ಆರಂಭಿಸಿದೆ. ಮಸ್ಕತ್ ನಿಂದ ಢಾಕಾಗೆ 126 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಬಾಂಗ್ಲಾದೇಶ ವಿಮಾನದ ಪೈಲಟ್ ಗೆ ದಾರಿ ಮಧ್ಯೆ ಹೃದಯಾಘಾತವಾಯಿತು. ಹಾಗಾಗಿ ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.
ಹೃದಯಾಘಾತಕ್ಕೆ ಒಳಗಾಗಿರುವ ಪೈಲಟ್ ಪರಿಸ್ಥಿತಿ ಈಗಲೂ ಗಂಭೀರವಾಗಿದ್ದು, ಅವರು ವಿಮಾನ ನಿಲ್ದಾಣಕ್ಕೆ 10 ಕಿ.ಮೀ ದೂರವಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಬಿಮಾನ್ ಏರ್ ಲೈನ್ಸ್ ಸಂಸ್ಥೆ ಪರ್ಯಾಯ ಸಿಬ್ಬಂದಿ ವ್ಯವಸ್ಥೆ ಮಾಡಿದ ನಂತರ, ವಿಮಾನ ಪ್ರಯಾಣಿಕರೊಂದಿಗೆ ಢಾಕಾದತ್ತ ಹೊರಟಿತು ಎಂದು ನಾಗಪುರ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
PublicNext
28/08/2021 01:25 pm