ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗವು ಬೆಂಗಳೂರು- ತಿರುಪತಿ ಹೋಗುವ ಪ್ರಯಾಣಿಕರಿಗೆ ವಿಶೇಷ ಪ್ಯಾಕೇಜ್ ಟೂರ್ ಘೋಷಿಸಿದೆ.
ಬೆಂಗಳೂರಿನ ಶಾಂತಿನಗರದಿಂದ ಹೊರಡುವ ತಿರುಪತಿ ಬಸ್ 8 ನಿಲ್ದಾಣ (ಜಯನಗರ ನಾಲ್ಕನೇ ಬ್ಲಾಕ್, ನಾಗಸಂದ್ರ, ಎನ್.ಆರ್ ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು ಟಿಟಿಎಂಸಿ, ಮಾರತಹಳ್ಳಿ, ಐಟಿಐ ಗೇಟ್ ಹಾಗೂ ಕೆ.ಆರ್.ಪುರಂ ನಿಲ್ದಾಣ)ಗಳಿಂದ ಪ್ರಯಾಣಿಕರು ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಡಲಿದೆ. ಪ್ರತಿ ದಿನ ರಾತ್ರಿ 8:45ಕ್ಕೆ ಬಸ್ ತಿರುಪತಿಗೆ ಸಂಚರಿಸಲಿದೆ.
ವಿಶೇಷ ಪ್ಯಾಕೇಜ್ನಲ್ಲಿ ಭಾನುವಾರದಿಂದ ಗುರುವಾರದವರೆಗೆ ಹೊರಡುವ ಪ್ರಯಾಣಿಕರಿಗೆ 2,200 ರೂ.+ಜಿಎಸ್ಟಿ ಟಿಕೆಟ್ ಅದರಲ್ಲಿ 6ರಿಂದ 12 ವರ್ಷದೊಳಗಿನ ಮಕ್ಕಳಿಗೆ 1,800 ರೂ. +ಜಿಎಸ್ಟಿ ಶುಕ್ರವಾರದಿಂದ ಶನಿವಾರ ಹೊರಡುವ ಪ್ರಯಾಣಿಕರಿಗೆ 2,600 ರೂ. +ಜಿಎಸ್ಟಿ ಟಿಕೆಟ್, 6ರಿಂದ 12 ವರ್ಷದೊಳಗಿನ ಮಕ್ಕಳಿಗೆ 2,000 ರೂಪಾಯಿ +ಜಿಎಸ್ಟಿ ಟಿಕೆಟ್ ದರ ನಿಗದಿ ಪಡಿಸಿದೆ.
PublicNext
05/01/2021 08:01 pm