ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್: ಜುಲೈ 1ರಿಂದ ಪರಿಷ್ಕರಣಾ ದರ ಜಾರಿ ..?

ಬೆಂಗಳೂರು: ರಾಜ್ಯದ ಜನತೆಗೆ ಸದ್ಯದಲ್ಲಿಯೇ ವಿದ್ಯುತ್ ಶಾಕ್ ಎದುರಾಗಲಿದೆ. ಜುಲೈ 1ರಿಂದಲೇ ಪರಿಷ್ಕ್ರತ ದರ ಜಾರಿಯಾಗಲಿದೆ.

ಹೌದು.. ಪ್ರತಿ ತಿಂಗಳು 100 ಯೂನಿಟ್‌ ಹಾಗೂ ಅದಕ್ಕೂ ಹೆಚ್ಚು ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19ರಿಂದ 31ರವರೆಗೆ ಪಾವತಿಸಬೇಕಾಗುತ್ತದೆ. ಈ ದರ ಆಯಾ ವಿದ್ಯುತ್‌ ವಿತರಣಾ ಕಂಪನಿಗಳ ಮೇಲೆ ಅವಲಂಬನೆಯಾಗಿದೆ. ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ , ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋ (ಕೆಇಆರ್‌ಸಿ)ಕ್ಕೆ ಎಸ್ಕಾಂಗಳು (ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಸೆಸ್ಕ್) ಪ್ರಸ್ತಾವ ಸಲ್ಲಿಸಿದ್ದವು. ತಮ್ಮ ಈ ಪ್ರಸ್ತಾನವನೆಯಲ್ಲಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಪ್ರತಿ ಯೂನಿಟ್‌ಗೆ 38ರಿಂದ 55 ರೂಪಾಯಿವರೆಗೆ ವಸೂಲಿ ಮಾಡಲು ಎಸ್ಕಾಂಗಳು ಕೋರಿದ್ದವು.

ಬೆಸ್ಕಾಂ- ರೂ. 55.28

ಮೆಸ್ಕಾಂ- ರೂ. 38.98

ಸೆಸ್ಕ್‌- ರೂ. 40.47

ಹೆಸ್ಕಾಂ- ರೂ. 49.54

ಗೆಸ್ಕಾಂ- ರೂ. 39.36

ಇನ್ನು ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಕೆಇಆರ್‌ಸಿ ಅನುಮೋದನೆ ನೀಡಿದೆ ಆದರೂ ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ. ಇದರಲ್ಲಿ ಕಡಿತಗೊಳಿಸಿದ್ದು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಹಕರಿಗೆ ಎಸ್ಕಾಂ ನಿಗದಿಪಡಿಸಿರುವ ನೂತನ ದರದಿಂದ ಹೊರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಒಂದೆಡೆ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗಿದ್ದರೆ, ಕಲ್ಲಿದ್ದಲು, ಅಭಾವ ಹಾಗೂ ದರ ಹೆಚ್ಚಳವಾಗಿದೆ. ಅಲ್ಲದೇ ಆರ್ಥಿಕವಾಗಿ ಎಸ್ಕಾಂಗಳು ನಷ್ಟದಲ್ಲಿರುವ ಕಾರಣ ತಾತ್ಕಾಲಿಕ ಮಟ್ಟಕ್ಕೆ ದರ ಹೆಚ್ಚು ಮಾಡಲಾಗಿದೆ. ಹೊರೆ ಕಡಿಮೆಯಾದ ಕೂಡಲೇ ಬೆಲೆಗಳು ವಾಪಸ್ ಯಥಾಸ್ಥಿತಿಗೆ ಬರುವುದಾಗಿಯೂ ಅವು ತಿಳಿಸಿವೆ.

Edited By : Nagaraj Tulugeri
PublicNext

PublicNext

28/06/2022 02:02 pm

Cinque Terre

44.13 K

Cinque Terre

1

ಸಂಬಂಧಿತ ಸುದ್ದಿ