ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈರುತ್ಯ ರೈಲ್ವೆ ಮತ್ತೊಂದು ಸಾಧನೆ: ಮೊದಲ ಬಾರಿಗೆ ರೈಲು ಮೂಲಕ 32 ಬಸ್ ಗಳ ಸಾಗಾಣೆ

ಹುಬ್ಬಳ್ಳಿ: ನೈರುತ್ಯ ರೈಲ್ವೆ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯಲ್ಲಿ ಅತ್ಯಾಧುನಿಕತೆ ಹಾಗೂ ವಾಣಿಜ್ಯೋದ್ಯಮ ಹಾಗೂ ಕೈಗಾರಿಕೆ ಸ್ನೇಹಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಬೆಂಗಳೂರು ವಿಭಾಗದ ದೊಡ್ಡ ಬಳ್ಳಾಪುರ ನಿಲ್ದಾಣದಿಂದ ಚಂಡೀಗಢ ನಗರಕ್ಕೆ ಮೊಟ್ಟ ಮೊದಲ ಬಾರಿಗೆ 32 ಬಸ್ ಗಳನ್ನು ರೈಲಿನ ಮೂಲಕ ಸಾಗಿಸಲಾಗಿದೆ.

ಹೌದು.. ಈ ಬಸ್ ಗಳು ಹಿಮಾಚಲ ಪ್ರದೇಶ ರಾಜ್ಯ ಸಾರಿಗೆಯಲ್ಲಿ ಸೇವೆಗೆ ಬಳಸಲಾಗುತ್ತದೆ. ಅಶೋಕ್ ಲೈಲ್ಯಾಂಡ್ ಬಸ್ಸುಗಳಾಗಿವೆ. 2021-22 ರಲ್ಲಿ ನೈರುತ್ಯ ರೈಲ್ವೆ 238 ರೈಲುಗಳಲ್ಲಿ ಟೊಯೊಟಾ, ಕಿಯಾ ಕಾರುಗಳು, ಸುಝುಕಿ TVS ಸ್ಕೂಟರ್ ಗಳನ್ನೂ ಭಾರತದ ವಿವಿಧ ಭಾಗಗಳಿಗೆ ಸಾಗಿಸಿದೆ.

ಹೊಸದಾಗಿ ನಿರ್ಮಿಸಲಾದ ದ್ವಿ ಚಕ್ರ, ಮತ್ತು 4 ಚಕ್ರದ ವಾಹನಗಳ ಸಾರಿಗೆಗೆ ಇತ್ತೀಚೆಗೆ ಅನೇಕ ಕಂಪನಿಗಳು ರೈಲ್ವೆಯನ್ನು ನೆಚ್ಚಿಕೊಂಡಿವೆ.ರೈಲಿನ ಮೂಲಕ ಸಾಗಾಣಿಕೆ ಸುರಕ್ಷಿತ, ಶೀಘ್ರ ಮತ್ತು ಸುಗಮ. ಅಲ್ಲದೆ, ರಸ್ತೆಯಲ್ಲಿ ಸಾಗಾಣಿಕೆ ಮಾಡುವುದಕ್ಕೆ ಹೋಲಿಸಿದರೆ, ಇಂಗಾಲದ ಹೊರಸೂಸುವಿಕೆ ಅತಿ ಕಡಿಮೆ. ಇದರಿಂದ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಈಗ, ಟೊಯೊಟಾ, ಕಿಯಾ, ಸುಝುಕಿ ಕಂಪನಿಗಳ ಜೊತೆ, ಅಶೋಕ್ ಲೈಲ್ಯಾಂಡ್ ವಾಹನಗಳನ್ನು ಸಾಗಿಸುತ್ತಿರುವದಕ್ಕೆ ರೈಲ್ವೆ ಇಲಾಖೆ ಹೆಮ್ಮೆಪಡುವಂತಾಗಿದೆ.

Edited By : Nagesh Gaonkar
PublicNext

PublicNext

19/05/2022 10:59 am

Cinque Terre

171.99 K

Cinque Terre

1

ಸಂಬಂಧಿತ ಸುದ್ದಿ