ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕನ್ನಡ: ಸಾಮಾಜಿಕ ಬಹಿಷ್ಕಾರದಿಂದ ಕಂಗೆಟ್ಟ ಕುಟುಂಬ, ನ್ಯಾಯಕ್ಕಾಗಿ ಮೊರೆ

ಅಂಕೋಲಾ: ಉತ್ತರ ಕನ್ನಡದ ಜಿಲ್ಲೆಯಲ್ಲೊಂದು ಬಹಿಷ್ಕಾರ ಪ್ರಕರಣ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಗೌಡರ ಕೇರಿಯ ಹಾಲಕ್ಕಿ ಸಮುದಾಯದ ನಿವಾಸಿ ಬಂಟಾಗೌಡರ ಕುಟುಂಬ ಕಳೆದ ಹತ್ತುವರ್ಷದ ಹಿಂದೆ ನಡೆದ ಮಗನ ಮದುವೆಯಲ್ಲಿ ಊರ ಗೌಡನಿಗೆ ವೀಳ್ಯ ಕೊಡಲಿಲ್ಲವೆಂಬ ಕಾರಣಕ್ಕೆ ಆನಂದ ಗೌಡ ಎಂಬವರ ನೇತೃತ್ವದಲ್ಲಿ ಬಂಟಾಗೌಡರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರವಹಾಕಲಾಗಿತ್ತು.

ಅಂದಿನಿಂದ ಇಂದಿನವರೆಗೂ ಹಾಲಕ್ಕಿ ಸಮುದಾಯದವರು ಬಂಟಾಗೌಡರ ಕುಟುಂಬದವರ ಜೊತೆ ಯಾವುದಕ್ಕೂ ಸಹಾಯ, ಸಹಕಾರವನ್ನು ಕೊಡುವಂತಿಲ್ಲ. ಮಾತನಾಡುವಂತಿಲ್ಲ. ಊರ ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಕೊಡುವಂತಿಲ್ಲ. ನೀರನ್ನೂ ಕೊಡುವ ಹಾಗಿಲ್ಲ. ಇಂತಹ ಹೀನಾಯ ಸ್ಥಿತಿ ಬಂಟಾಗೌಡರ ಕುಟುಂಬದ್ದು. ಬಹಿಷ್ಕಾರಕ್ಕೊಳಗಾದ ಬಂಟಾಗೌಡ ಮತ್ತೂ ಬಹಿಷ್ಕಾರದ ನೇತೃತ್ವ ವಹಿಸಿದ ಆನಂದುಗೌಡ ಒಂದೇ ಕುಟುಂಬದವರು. ಆಸ್ತಿವಿವಾದ, ಕೌಟುಂಬಿಕ ಜಗಳಗಳು ಕ್ಷುಲ್ಲಕ ಕಾರಣವನ್ನೇ ಎದುರಾಗಿಟ್ಟುಕೊಂಡು ಬಹಿಷ್ಕರಿಸಿದ್ದಾರೆ. ಆನಂದು ಗೌಡ ಸಮುದಾಯವನ್ನು ದಿಕ್ಕುತಪ್ಪಿಸಿ, ಊರ ಗೌಡರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇಂತಹ ಅಮಾನವೀಯ ಪರಿಸ್ಥಿತಿಯನ್ನು ತಂದಿದ್ದಾರೆಂಬುದು ಮೃತ ಬಂಟಾಗೌಡರ ಪತ್ನಿ ಗಂಗಾ ಗೌಡರ ಆರೋಪವಾಗಿದೆ.

Edited By :
PublicNext

PublicNext

21/08/2022 05:17 pm

Cinque Terre

38.28 K

Cinque Terre

1