ಗದಗ : ಗದಗ ಜಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸುವರ್ಣಗಿರಿ ಗ್ರಾಮದ ಬಾಬಣ್ಣ ನಾಯಕ ಅವರ ಮನೆ ಕಳೆದ ಮೂರು ದಿನದ ಹಿಂದೆ ಮಳೆಯ ಹೊಡೆತಕ್ಕೆ ಸಂಪೂರ್ಣ ಬಿದ್ದು ಹೋಗಿದೆ.
ಆದರೆ ಇದುವರೆಗೂ ಯಾವುದೇ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಪರೀಶಿಲನೆ ಮಾಡಲು ಬಂದಿಲ್ಲ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೊಡಿಕೊಂಡರು.
ಅತಿಯಾದ ಮಳೆಯಿಂದಾಗಿ ಬಿದ್ದ ಮನೆಗಳಿಗೆ 72 ಗಂಟೆಗಳಲ್ಲಿ ಪರಿಹಾರ ಒದಗಿಸಬೇಕು ಎಂದು ಸರಕಾರ ಹೇಳುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆ ಬಿದ್ದವರು ಬಿದಿಯಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಖೇಧಕರ ಸಂಗತಿಯಾಗಿದೆ.
ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಸಹಾಯಧನ ಎಂಬಂತೆ 2500 ರೂ ರಿಂದ 50000 ರೂ ಬರುತ್ತೆ ಆದರೆ ಪಂಚಾಯತ ಇಲಾಖೆಯಿಂದ ಯಾವುದೇ ಆಶ್ರಯ ಮನೆ ಬರುವುದಿಲ್ಲ ಎಂದು ಹೇಳುತ್ತಾರೆ. ಸಂಪೂರ್ಣ ಮನೆ ಬಿದ್ದರು ಪರಿಹಾರ ಮಾತ್ರ ಸಿಗುತ್ತಿಲ್ಲ.
ಸದ್ಯ ಬಾಬಣ್ಣ ಲಮಾಣಿ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ಆಶ್ರಯ ಮನೆ ನೀಡಿಲ್ಲ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಈ ವರ್ಷ ಬರುತ್ತೆ ಮುಂದಿನ ವರ್ಷ ಬರುತ್ತೆ ಕುಂಟು ನೆಪ ಹೇಳುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.
PublicNext
05/08/2022 06:03 pm