ದಾವಣಗೆರೆ: ಹರಿಹರ ಪಟ್ಟಣದಲ್ಲಿ ತುಂಗಭದ್ರಾ ನದಿ ತಟದ ಸ್ವಚ್ಛತಾ ಕೈಂಕರ್ಯದಲ್ಲಿ ನಟ, ನಿರೂಪಕ ಮಾಸ್ಟರ್ ಆನಂದ್ ಪಾಲ್ಗೊಂಡರು.
ಅವಧೂತ ವಿನಯ್ ಗುರೂಜಿ ಗ್ರೀನ್ ಗೆಳೆಯರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯದಲ್ಲಿ ಸಂಘದ ಪದಾಧಿಕಾರಿಗಳ ಜೊತೆ ಸ್ವಚ್ಛಗೊಳಿಸುವ ಮೂಲಕ ಆನಂದ್ ಗಮನ ಸೆಳೆದರು.
ಹರಿಹರದ ರಾಘವೇಂದ್ರ ಮಠದ ಹಿಂಭಾಗದಲ್ಲಿ ಹರಿಯುವ ತುಂಗಭದ್ರಾ ತಟದಲ್ಲಿ ಕಸ, ತ್ಯಾಜ್ಯ ಎಸೆಯಲಾಗಿತ್ತು. ಬೆಂಗಳೂರಿನಿಂದ ಬಂದ 20 ಜನರ ತಂಡದ ಸದಸ್ಯರಿಗೆ ಹರಿಹರದ ಸ್ಥಳೀಯರು, ಸಾರ್ವಜನಿಕರು ಸಾಥ್ ನೀಡಿದರು. ಬಳಿಕ ಹರಿಹರೇಶ್ವರ ದೇವಸ್ಥಾನದ ಹಿಂಭಾಗದಲ್ಲೂ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಾಸ್ಟರ್ ಆನಂದ್, ಸ್ವಚ್ಛತೆ ವಿನಯ್ ಗುರೂಜಿ ಅವರ ಕನಸಾಗಿತ್ತು. ಅವರು ಯಾರಿಗೂ ಸ್ವಚ್ಛತೆ ಮಾಡಿ ಅಂತ ಹೇಳದೆ ಕಾರ್ಯ ಮಾಡಿದ್ರು. ಅದರಿಂದ ದತ್ತಪೀಠ ಸೇರಿ ಹಲವು ಸ್ಥಳಗಳು ಸ್ವಚ್ಛ ವಾದವು. ಹೀಗಾಗಿ ನಾವೂ ಏನಾದ್ರು ಮಾಡಬೇಕಲ್ಲ ಅಂತ ಹೇಳಿ, ಸ್ನೇಹಿತರ ಜೊತೆ ಬಂದು ಸ್ವಚ್ಛಗೊಳಿಸಿದ್ದೇವೆ ಎಂದರು.
PublicNext
13/06/2022 03:03 pm