ದಾವಣಗೆರೆ: ದಾವಣಗೆರೆ ಪಟ್ಟಣದಲ್ಲಿ ಸುರಿದ ಮಳೆ ಜನರಿಗೆ ತಂಪೆರೆದರೆ ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತಗೊಂಡಿತು.
ಕಳೆದ ಎರಡರಿಂದ ಮೂರು ದಿನಗಳಿಮದ ಮೋಡ ಕವಿದ ವಾತಾವರಣವಿದ್ದು ನಗರದಲ್ಲಿ ತುಂತುರು ಮಳೆಯಾಗುತ್ತಿದೆ. ಆದ್ರೆ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು.
ರಸ್ತೆ ಮೇಲೆಲ್ಲಾ ನೀರು ತುಂಬಿದ ಕಾರಣ ವಾಹನ ಸವಾರರು ವಾಹನ ಚಲಾಯಿಸಲು ಪರದಾಟ ನಡೆಸಿದರು. ನಗರದ ಕೆ. ಬಿ. ಬಡಾವಣೆ, ಹಳೇ ದಾವಣಗೆರೆಯ ಮಂಡಿಪೇಟೆ, ತಗ್ಗು ಪ್ರದೇಶಗಳ ಜನರ ಮನೆಗೆ ನೀರು ನುಗ್ಗುವ ಭೀತಿಯೂ ಎದುರಾಗಿತ್ತು.
ಸದ್ಯಕ್ಕೆ ಮಳೆ ಕಡಿಮೆಯಾಗಿದ್ದು, ನೀರಿನ ಹರಿವು ಸಹ ಕುಂಠಿತವಾಗುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರುಬಿಟ್ಟರು. ಅಸನಿ ಚಂಡಮಾರುತದ ಎಫೆಕ್ಟ್ ನಿಂದ ಮಳೆ ಸುರಿಯುತ್ತಿದೆ. ಜಗಳೂರು, ಚನ್ನಗಿರಿ, ಹೊನ್ನಾಳಿ ಸೇರಿದಂತೆ ಹಲವೆಡೆ ವರುಣನ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ.
PublicNext
11/05/2022 04:01 pm