ನಾರಾಯಣಪುರದ ಬಸವ ಸಾಗರ ಜಲಶಾಯದಿಂದ ಅತೀ ಹೆಚ್ಚು ನೀರು ಹರಿದು ಬರುತ್ತಿದ್ದು, ಕೃಷ್ಣಾ ನದಿಯ ಪ್ರವಾಹದಿಂದ ನಡುಗಡ್ಡೆಯಾಗಿದೆ. ಆಮಲಿಂಗೇಶ್ವರದೊಡ್ಡಿ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಎಚ್.ಅಮ್ಮಾಪುರ ಸಮೀಪದ ಆಮಲಿಂಗೇಶ್ವರದೊಡ್ಡಿಯಲ್ಲಿ 30 ಜನ ವಾಸವಿದ್ದಾರೆ.
ಇವರ ಬಳಿಗೆ ಬೈಕ್ ಮೂಲಕ ದೊಡ್ಡಿಯ ತೀರಕ್ಕೆ ನಿನ್ನೆ ಸಂಜೆ ವೇಳೆ ತೆರಳಿದ ಶಾಸಕ ರಾಜುಗೌಡ ಅವರು, ದೊಡ್ಡಿಯ ಮಹಿಳೆ ಜೊತೆ ಮೊಬೈಲ್ ಕರೆ ಮಾಡಿ ಜನರ ಸಮಸ್ಯೆ ಆಲಿಸಿದರು.
ಅಲ್ಲದೇ ಸೇತುವೆ ನಿರ್ಮಾಣ ಮಾಡಿ ಅನುಕೂಲ ಮಾಡಬೇಕೆಂದ ಮಹಿಳೆ, ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
01/08/2021 10:27 am