ಕೊರಟಗೆರೆ: ಮಂಗಳವಾರ ರಾತ್ರಿ ಸುರಿದ ಮಳೆಗೆ ಸುವರ್ಣಮುಖಿ ನದಿ ಇಕ್ಕೆಲಗಳಲ್ಲಿ ಇರುವಂತಹ ಹುಲಿಕುಂಟೆ ಮತ್ತು ಗುಂಡಿನ ಪಾಳ್ಯ ಸೇರಿದಂತೆ ಇತರ ಗ್ರಾಮಗಳ ಜಮೀನಿನಲ್ಲಿ ರಣಮಳೆ ತೋಟ ತುಡಿಕೆ ಗಳನ್ನು ಸಂಪೂರ್ಣ ಜಲಾವೃತ ಮಾಡಿದ್ದು, ರೈತರು ತಮ್ಮ ಫಸಲಿಗೆ ಬಂದಂತಹ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸಂಬಂಧಪಟ್ಟ ಕೃಷಿ ಅಧಿಕಾರಿಗಳು ನಮ್ಮ ಕಷ್ಟವನ್ನು ನೋಡಿ ನಮಗೆ ಪರಿಹಾರ ಕೊಡಿಸಬೇಕು ಎಂದು ರೈತರು ಅವಲತ್ತು ಕೊಳ್ಳುತ್ತಿದ್ದು ಅಧಿಕಾರಿಗಳ ಬರುವಿಕೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಒಟ್ಟಾರೆ ಬದುಕನ್ನು ಕಟ್ಟಿ ಕೊಳ್ಳಬೇಕು ಎಂದು ಕೃಷಿ ಮಾಡುತ್ತಿದ್ದ ರೈತರ ಬದುಕು ಮಳೆಯಿಂದ ಬೀದಿಗೆ ಬಂದಂತಾಗಿದೆ. ಜನಪ್ರತಿನಿಧಿಗಳು ಮತ್ತು ಸರ್ಕಾರ ಹಾಗೂ ಅಧಿಕಾರಿ ವರ್ಗ ಸೂಕ್ತ ಪರಿಹಾರ ಕಲ್ಪಿಸುವುದರೊಂದಿಗೆ ರೈತರ ಬದುಕಿಗೆ ಆಶ್ರಯ ವಾಗಬೇಕಿದೆ.
ವರದಿ,: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
03/08/2022 12:19 pm