ಗದಗ: ಜಿಲ್ಲಾದ್ಯಾಂತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜಾನುವಾರು ಅಸ್ತವ್ಯಸ್ತಗೊಂಡಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಇಟ್ಟಿಕೇರೆಯೂ ಸಂಪೂರ್ಣವಾಗಿ ಭರ್ತಿ ಆಗಿದ್ದರಿಂದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನವು ಸಂಪೂರ್ಣ ಜಲಾವೃತಗೊಂಡಿದೆ.
ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಇಟ್ಟಿಕೇರೆಯೂ ಸಂಪೂರ್ಣ ಭರ್ತಿಯಾಗಿದ್ದು, ಪರಿಣಾಮ ಇಟ್ಟಿಕೇರೆಯ ಮಳೆಯ ನೀರು ಶಿರಡಿ ಸಾಯಿಬಾಬಾ ಮಂದಿರಕ್ಕೆ ನುಗ್ಗಿದೆ.
ಲಕ್ಷ್ಮೇಶ್ವರ ಪಟ್ಟಣದ ಇಟ್ಟಿಕೇರೆಯಲ್ಲಿ ಚರಂಡಿಯ ನೀರು ಸೇರಿಕೊಂಡಿದ್ದರಿಂದ ನೀರು ಕಲುಷಿತವಾಗಿ ಗಬ್ಬೆದ್ದು ನಾರುತ್ತಿದೆ. ಭಕ್ತರು ಮುಗುಮುಚ್ಚಿಕೊಂಡು ದೇವರ ದೇವರದರ್ಶನ ಮಾಡುವಂತಾಗಿದೆ. ಇಟ್ಟಿಕೇರಿಯ ಮಳೆಯ ನೀರಿನ ಜೊತೆಗೆ ಇದರಲ್ಲಿ ಚರಂಡಿಯ ಕಲುಷಿತ ನೀರು ಬಂದು ದೇವಸ್ಥಾನ ಹಾಳು ಆಗುತ್ತಿದೆ ಎಂದು ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
PublicNext
29/08/2022 03:23 pm