ವರದಿ- ಸಂತೋಷ ಬಡಕಂಬಿ.
ಬೆಳಗಾವಿ: ರೈತ ಹುತಾತ್ಮ ದಿನ ಹಿನ್ನೆಲೆ ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ 4ರ ಕೆಳಗೆ ಬರುವ ಸಾಂಬ್ರಾಗೆ ಹೋಗುವ ಎಸ್‍ಸಿ ಮೋಟರ್ ಬ್ರಿಡ್ಜ್ಗೆ ರೈತ ವೃತ್ತ ಎಂದು ವಿವಿಧ ರೈತ ಸಂಘಟನೆಗಳ ಮುಖಂಡರು ಸೇರಿಕೊಂಡು ಇಂದು ನಾಮಫಲಕಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಹುತಾತ್ಮ ರೈತರ ಸವಿ ನೆನಪಿಗಾಗಿ ಈಗ ರೈತ ಸರ್ಕಲ್ ಮಾಡಿದ್ದೇವೆ. ಯಾವೊಬ್ಬ ಶಾಸಕರು ಮುಳುಗಡೆಯಾದಾಗ, ರೈತರಿಗೆ ಗೊಬ್ಬರ ಸಿಗದೇ ಇದ್ದಾಗ, ರೈತನ ಸಮಸ್ಯೆಗಳು ಹೆಚ್ಚಾದಾಗ ಹಾಗೂ ರೈತರು ಹುತಾತ್ಮರಾಗಿದ್ದಕ್ಕಾಗಿ ರಾಜೀನಾಮೆ ನೀಡಿಲ್ಲ. ತಮ್ಮ ಅಧಿಕಾರಕ್ಕಾಗಿ ರಾಜೀನಾಮೆ ನೀಡಿದ್ದಾರೆ. 13 ಜಿಲ್ಲೆಗಳಲ್ಲಿ ಮುಳಗಡೆಯಾದ ಗ್ರಾಮಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು. ಅದೇ ರೀತಿ ರಾಜಕಾರಣಿಗಳ ಒಡೆತನದ ಕಾರ್ಖಾನೆಗಳು ರೈತರ ಬಾಕಿ ಕಬ್ಬಿನ ಬಿಲ್ ನೀಡುವಂತೆ ಆಗ್ರಹಿಸಿದರು.
ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಶೇ.90ರಷ್ಟು ರೈತರು ಇದ್ದರೂ ಕೂಡ ಬೆಳಗಾವಿಯಲ್ಲಿ ಒಂದು ರೈತ ಸರ್ಕಲ್ ಎಂದು ಇರಲಿಲ್ಲ. ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಎಲ್ಲ ರೈತ ಮುಖಂಡರು ಸೇರಿಕೊಂಡು ಗಾಂಧಿ ನಗರದಲ್ಲಿ ರೈತ ಸರ್ಕಲ್ ಎಂದು ಉದ್ಘಾಟನೆ ಮಾಡಿದ್ದು ಹೆಮ್ಮೆಯ ವಿಚಾರ ಎಂದರು. ಈ ವೇಳೆ ಅನೇಕ ರೈತರು ಹಾಗೂ ಇತರರು ಉಪಸ್ಥಿತರಿದ್ದರು.
PublicNext
21/07/2022 06:45 pm