ಬಂಡಿಪೋರ್(ಜಮ್ಮು-ಕಾಶ್ಮೀರ) : ಅಸ್ವಸ್ಥ ಮಹಿಳೆ ಸ್ಟ್ರೆಚರ್ ಮೂಲಕ ಹೊತ್ತ ಭಾರತೀಯದ ಸೇನೆಯ ಚೀನಾರ್ ಕಾರ್ಪ್ಸ್ ಯೋಧರು ಸುಮಾರು ಒಂದೂವರೆ ಕಿ.ಮೀ ದಟ್ಟವಾಗಿ ಆವರಿಸಿದ ಹಿಮದ ನಡುವೆ ಹೊತ್ತು ನಡೆದುಕೊಂಡೇ ಬಂದಿದ್ದಾರೆ. ಹೀಗೆ ಹೆಲಿಪ್ಯಾಡ್‌ವರೆಗೂ ಮಹಿಳೆಯನ್ನು ಕರೆತಂದ ಯೋಧರು ಅಲ್ಲಿಂದ ಬಂಡಿಪೋರ್ ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
“ಸಿವಿಲ್ ಹೆಲಿಕಾಪ್ಟರ್ ಸೇವೆಗಳು ಮತ್ತು ಬ್ಲಾಕ್ ಮೆಡಿಕಲ್ ಆಫೀಸ್, ದಾವರ್, ಚಿನಾರ್ ಯೋಧರು ಬರೌಬ್‌ನಿಂದ ಫಾಜಲಿ ಬೇಗಂ ಅವರನ್ನು ಸ್ಥಳಾಂತರಿಸಿದ್ದಾರೆ. ಅಲ್ಲಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಬಂಡಿಪೋರಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು” ಎಂದು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.
ಶ್ರೀನಗರದಲ್ಲಿ ಶನಿವಾರ ಮೈನಸ್ 3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ವರದಿಯಾಗಿದೆ ಮತ್ತು ಪಹಲ್ಗಾಮ್ ಕನಿಷ್ಠ ಮೈನಸ್ 8.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ವರದಿ ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
PublicNext
12/02/2022 04:36 pm