ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಹೆಸರಿಗಷ್ಟೇ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ;ಇಲ್ಲಿ ಎಲ್ಲವೂ ಕಹಿ!

ತುರುವೇಕೆರೆ: ಹೆಸರಿಗಷ್ಟೇ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ, ಬಡರೋಗಿಗಳ ರಕ್ತ ಹೀರುವ ಕೆಲಸಕ್ಕೆ ಮುಂದಾದ ಜನ ಔಷಧಿ ಕೇಂದ್ರದ ಸಿಬ್ಬಂದಿ ತುರುವೇಕೆರೆ ಯಲ್ಲಿದ್ದಾರೆ.

ಶಾಸಕರ ಮಾತಿಗೂ ಡೋಂಟ್ ಕೇರ್ ! ತನ್ನದೇ ರೂಲ್ಸ್. ಬೇಕಾದರೆ ತಗೊಳ್ಳಿ ಇಲ್ಲಾಂದ್ರೆ ಜಾಗ ಖಾಲಿಮಾಡಿ ಎಂದು

ಪ್ರಶ್ನೆ ಮಾಡುವ ರೋಗಿಗಳ ಮೇಲೆ ಎರಗಿಬೀಳುವ ಜನ ಔಷಧಿ ಕೇಂದ್ರದ ರಘು ಇಲ್ಲಿನ ಕೆಲಸಗಾರ.

ಶುಕ್ರವಾರ ಕ್ಯಾಲ್ಸಿಯಂ ಕಾರ್ಬೊನೇಟ್ 500mg ಹತ್ತು ಮಾತ್ರೆಯೊಂದರ ಶೀಟಿನ ಎಂ.ಆರ್.ಪಿ.ಬೆಲೆ 18.00 ರೂಗೆ 180 ಪಡೆದು ವಂಚಿಸುವ ವೇಳೆ ವಂಚಕ ಸಾರ್ವಜನಿಕರಿಗೆ ಲಾಕ್ ಆಗಿದ್ದಾನೆ.

ತುರುವೇಕೆರೆ ಸಾರ್ವಜನಿಕ ಕೇಂದ್ರಕ್ಕೆ ದಿನವೊಂದಕ್ಕೆ ನೂರಾರು ಮಂದಿ ತಾಲ್ಲೂಕಿನ ಮೂಲೆ ಮೂಲೆಯಿಂದ ಚಿಕಿತ್ಸೆಗೆಂದು ಬರುತ್ತಾರೆ. ಅದೇ ರೀತಿ ಚಿಕಿತ್ಸೆಗೆ ಬರುವ ಎಲ್ಲರಿಗೂ ಸರಬರಾಜಿಲ್ಲದ ಔಷಧಿಗಳನ್ನು ವೈದ್ಯರು ಹೊರಗಡೆ ತರಲು ಬರೆಯುತ್ತಾರೆ.

ಇದನ್ನೇ ಬಂಡವಾಳ ಮಾಡಿಕೊಂಡ ಜನ ಔಷಧಿ ಕೇಂದ್ರದ ಸಿಬ್ಬಂದಿ ರೋಗಿಗಳಿಂದ ಒಂದಕ್ಕೆ ಹತ್ತರಂತೆ ಹಣಪಡೆದು ಬಡ ರೋಗಿಗಳ ರಕ್ತಹೀರುತ್ತಿರುವುದು ಇಂದಿನ ದುಸ್ಥಿತಿಯನ್ನು ಸಾರಿ ಹೇಳುತ್ತದೆ.

ಇನ್ನಾದರೂ ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳುವ ಅನಿವಾರ್ಯತೆ ಇದೆ.

Edited By :
PublicNext

PublicNext

22/07/2022 09:43 pm

Cinque Terre

78.65 K

Cinque Terre

6

ಸಂಬಂಧಿತ ಸುದ್ದಿ