ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಒತ್ತಾಯವಾಗಿ ನೆಲದ ಮೇಲೆ ಹೆರಿಗೆ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ: ಪಂಜಾಬ್‌ನಲ್ಲಿ ಅಮಾನುಷ ಘಟನೆ

ಪಠಾಣ್‌ಕೋಟ್: ಶ್ರೀ ಸಾಮಾನ್ಯರ ಆರೋಗ್ಯ ಹಾಗೂ ಶಿಕ್ಷಣಕ್ಕೆ ನಮ್ಮ ಸರಕಾರ ಮೊದಲ ಪ್ರಾಶಸ್ತ್ಯ ನೀಡುತ್ತದೆ ಎಂದು ಪಂಜಾಬ್‌ನ ಆಮ್ ಆದ್ಮಿ ನಾಯಕರು ಹೇಳುತ್ತಾರೆ. ಆದರೆ ಅಲ್ಲಿನ ಸರಕಾರಿ ಆಸ್ಪತ್ರೆಗಳ ವಾಸ್ತವ ಸ್ಥಿತಿ ಬೇರೆಯೇ ಇದೆ ಎಂಬುದು ಈ ಘಟನೆಯಿಂದ ತಿಳಿಯುತ್ತದೆ.

ಹೆರಿಗೆ ನೋವಿನ ಹಿನ್ನೆಲೆ ಮಹಿಳೆಯೊಬ್ಬರು ಪಂಜಾಬ್‌ನ ಪಠಾಣ್‌ಕೋಟ್ ಸಿವಿಲ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ಇವರಿಗೆ ಲೇಬರ್ ರೂಮ್ ಪ್ರವೇಶಿಸಲು ನಿರಾಕರಿಸಿದ್ದಾರೆ. ಮತ್ತು ಒತ್ತಾಯವಾಗಿ ಆಸ್ಪತ್ರೆಯ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಲು ತಿಳಿಸಿ ಅಲ್ಲಿಯೇ ಒತ್ತಾಯವಾಗಿ ಹೆರಿಗೆ ಮಾಡಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎ‌ಎಪಿ ಸರಕಾರವು ಆರೋಗ್ಯದ‌ ಕುರಿತಾದ ಜಾಹೀರಾತುಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಇತ್ತ ಬಡವರು ಆರೋಗ್ಯ ಸೌಲಭ್ಯಗಳು ಸಿಗದೇ ಹೈರಾಣಾಗಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಅವರು ಟ್ವೀಟ್ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

Edited By : Nagaraj Tulugeri
PublicNext

PublicNext

29/09/2022 07:10 pm

Cinque Terre

83.6 K

Cinque Terre

8

ಸಂಬಂಧಿತ ಸುದ್ದಿ