ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ಹಾಗೂ ಶಿಥಿಲಾವಸ್ಥೆ ಕಟ್ಟಡ ಕುಸಿತ ಘಟನೆಗಳ ಕುರಿತು ನಿನ್ನೆ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು . ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ರಸ್ತೆ ಪರಿಸ್ಥಿತಿ ಪರಿಶೀಲನೆ ಆಗಿದೆ. ಎಲ್ಲಾ ವಿಚಾರಗಳನ್ನ ವಲಯವಾರು ಮುಖ್ಯ ಅಭಿಯಂತರರು ಮಾಹಿತಿ ಕೊಟ್ಟಿದ್ದಾರೆ. ಮುಖ್ಯ ರಸ್ತೆಗಳ ಗುಂಡಿ ಮುಚ್ಚುವ ಕೆಲಸ 10 ದಿನಗಳ ಒಳಗೆ ಆಗಬೇಕು.ವಾರ್ಡ್ ರಸ್ತೆಗಳ ಗುಂಡಿಗಳನ್ನು 20 ದಿನಗಳಲ್ಲಿ ಮುಚ್ಚುವಂತೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಹೊರವಲಯ BWSSB ಕಾಮಗಾರಿಯಿಂದ ಬಹಳ ಹಾಳಾಗಿದೆ. ಈ ಕಾಮಗಾರಿಗಾಗಿ 2500 ಕಿ.ಮೀ ರಸ್ತೆಯನ್ನು ಕತ್ತರಿಸಲಾಗಿದೆ. ಇದಕ್ಕೆ ಅನುದಾನ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತೆ ಎಂದರು.
ಇನ್ನು ಪೈಥಾನ್ ವಾಹನಗಳ ವಿಚಾರವಾಗಿ ಮಾತನಾಡಿದ ಅವರು ಪೈಥಾನ್ ಮಿಶಿನ್ ಗಳನ್ನ ಎರಡು ವರ್ಷಗಳ ಹಿಂದೆ ತರಲಾಗಿತ್ತು ಅವನ್ನು ಗುಂಡಿ ಮುಚ್ಚಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಜೊತೆಗೆ ಡೆಂಘಿ ಕಂಟ್ರೋಲ್ ನಲ್ಲಿದೆ. ಆದರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ನಗರದಲ್ಲಿ ಇತರೆ ಮಾದರಿಯ ಫ್ಲೂಗಳೂ ಇದೆ. ಇದರ ಕಂಟ್ರೋಲ್ ಹಾಗೂ ಚಿಕಿತ್ಸೆಗೆ ಬಿಬಿಎಂಪಿ ಕ್ರಮ ವಹಿಸಿದೆ ಎಂದರು.
PublicNext
01/10/2021 05:00 pm