ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಬಾರದ ಬಸ್ ತಪ್ಪದ ಕಿರಿಕಿರಿ : ವಿದ್ಯಾರ್ಥಿಗಳ ಗೋಳು ಕೇಳುವವರಾರು?

ಹಾವೇರಿ : ಹಾವೇರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಬಸ್ಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿತ್ಯ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ನೇತಾಡಿಕೊಂಡು ಸಾವಿನ ಸವಾರಿ ಮಾಡುವಂತಹ ಪರಿಸ್ಥಿತಿಯಿದೆ. ಸಿ.ಎಂ. ತವರು ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದು ನಿಜಕ್ಕೂ ಖೇಧಕರ ಸಂಗತಿ.

ಸದ್ಯ ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಹಾವೇರಿಯಿಂದ ಶಿರಹಟ್ಟಿ ಕಡೆಗೆ ಹೊರಡುವ ಬಸ್ಸಿನಲ್ಲಿ. ಇನ್ನೂ ನಿತ್ಯ ಗ್ರಾಮೀಣ ಪ್ರದೇಶಗಳಿಂದ ನೂರಾರು ವಿದ್ಯಾರ್ಥಿಗಳು ಹಾವೇರಿಗೆ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಸಂಜೆ ಮರಳಿ ತಮ್ಮ ತಮ್ಮ ಊರುಗಳಿಗೆ ತೆರಳಲು ಸಮರ್ಪಕ ಬಸ್ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ.

ಸಂಜೆ 6 ನಂತರವಂತೂ ಗ್ರಾಮೀಣ ಪ್ರದೇಶಗಳ ಕಡೆಗೆ ಯಾವುದೇ ಬಸ್ಸುಗಳು ಸಂಚರಿಸದ ಕಾರಣ ಒಂದೇ ಬಸ್ಸಿನಲ್ಲಿ ಎರಡೂ ಬಸ್ಸುಗಳ ಜನ ತುಂಬಿಕೊಂಡು ಹೋಗುವಂತಾಗಿದೆ. ಈ ಹಿಂದೆ 6.45 ಕ್ಕಿದ್ದ ಹೆಬ್ಬಾಳ ಬಸ್ ತನ್ನ ಸಂಚಾರವನ್ನ ಸ್ಥಗಿತಗೊಳಿಸಿದ್ದೇ ಈ ಸಮಸ್ಯೆಗೆ ಕಾರಣವಾಗಿದೆ.

ಕೂಡಲೇ ಸಾರಿಗೆ ಇಲಾಖೆ ಸಂಜೆ ಹೊತ್ತಿನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾದ ಬಸ್ ಸೌಲಭ್ಯ ಕಲ್ಪಿಸಲಿ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

Edited By :
PublicNext

PublicNext

11/07/2022 09:44 pm

Cinque Terre

156.34 K

Cinque Terre

3

ಸಂಬಂಧಿತ ಸುದ್ದಿ