ವಿಶೇಷ ವರದಿ - ಗಣೇಶ್ ಹೆಗಡೆ
ಬೆಂಗಳೂರು: ಗಾರ್ಡನ್ ಸಿಟಿ, ಹೈಟೆಕ್ ಸಿಟಿ, ಸಿಲಿಕಾನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳುವ ನಮ್ಮ ಬೆಂಗಳೂರು ಮುಂದಿನ ದಿನದಲ್ಲಿ ಪೊಲ್ಯುಷನ್ ಸಿಟಿ ಆದ್ರೂ ಅಚ್ಚರಿ ಇಲ್ಲ.
ನಮ್ಮ ಬೆಂಗಳೂರಲ್ಲಿ ವಾಹನ ನೋಂದಣಿ ಕೋಟಿಗೆ ದಾಟಿದೆ.ಇದರಿಂದ ಬೆಂಗಳೂರು ಪರಿಸರ ಕೆಟ್ಟ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಬೆಂಗಳೂರಿನ ಜನ ಸಂಖ್ಯೆ ಸುಮಾರು 1 ಕೋಟಿ 30 ಲಕ್ಷ ಇದೆ. ಅದೇ ರೀತಿ ವಾಹನಗಳ ಸಂಖ್ಯೆ 1 ಕೋಟಿ ಸನಿಹಕ್ಕೆ ಬಂದಿದೆ. ವಾಹನ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋವನ್ನು ಆರಂಭಿಸಲಾಗಿದೆ. ದಿನಕ್ಕೆ 4 ಲಕ್ಷ ಮಂದಿ ಮೆಟ್ರೋದಲ್ಲಿ ಸಂಚರಿಸುತ್ತಾರೆ. ಇದರ ಹೊರತಾಗಿಯೂ ಖಾಸಗಿ ವಾಹನ ಬಳಕೆಯ ಸಂಖ್ಯೆ ಹೆಚ್ಚುತ್ತಿರುವುದು ಗಂಭೀರ ವಿಷಯವಾಗಿದೆ.
ಬೆಂಗಳೂರಿನಲ್ಲಿ 98 ಲಕ್ಷ 38 ಸಾವಿರದ 156 ವಾಹನಗಳು ಸಾರಿಗೆ ಇಲಾಖೆಯಲ್ಲಿ ಈವರೆಗೆ ನೋಂದಣಿ ಆಗಿವೆ. 2020 ಮಾರ್ಚ್ನಲ್ಲಿ 94 ಲಕ್ಷ 71 ಸಾವಿರದ 72 ವಾಹನಗಳು ಇದ್ದವು. ಆದರೆ, ಅದು ಮಾರ್ಚ್ 2021ನಲ್ಲಿ 98 ಲಕ್ಷ 38 ಸಾವಿರದ 156 ಏರಿಕೆ ಕಂಡಿದೆ. ನಗರದಲ್ಲಿ ಪ್ರತಿ ವರ್ಷ 5 ಲಕ್ಷಕ್ಕೂ ಹೊಸ ವಾಹನಗಳು ಸೇರ್ಪಡೆ ಆಗುತ್ತಿವೆ.
PublicNext
10/05/2022 07:51 pm