ದಾವಣಗೆರೆ: ಕೊರೊನಾ ಹಾವಳಿ ತಡೆಯುವ ಉದ್ದೇಶದಿಂದ ಶನಿವಾರ ಮತ್ತು ಭಾನುವಾರ ವಿಕೇಂಡ್ ಕರ್ಫ್ಯೂ ಘೋಷಿಸಿದ ಪರಿಣಾಮ ಪ್ರಯಾಣಿಕರಿಲ್ಲದೇ ದಾವಣಗೆರೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಂತಲ್ಲೇ ನಿಂತ ದೃಶ್ಯ ಕಂಡು ಬಂದವು.
ರಾಜ್ಯದಲ್ಲಿ ದಾವಣಗೆರೆ ಕೇಂದ್ರ ಭಾಗವಾಗಿದ್ದು ಇಲ್ಲಿಂದ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಮಂಗಳೂರು ಹಾಗೂ ತುಮಕೂರು, ಬೆಂಗಳೂರು, ಹೊಸಪೇಟೆ, ಬಳ್ಳಾರಿ ಸೇರಿದಂತೆ ಹಲವಾರ ಜಿಲ್ಲೆಗಳಿಗೆ ಬಸ್ ಸಂಚಾರ ಮಾಡುತ್ತವೆ. ಆದರೆ ಇಂದು ಎರಡನೇ ವಾರದ ವಿಕೇಂಡ್ ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಜನರು ಕೂಡ ಬಸ್ ನಿಲ್ದಾಣಗಳತ್ತ ಸುಳಿಯಲಿಲ್ಲ.
ನಿತ್ಯ ಸಾವಿರಾರು ಪ್ರಯಾಣಕರು ಆಗಮಿಸುವ ದಾವಣಗೆರೆ ಬಸ್ ನಿಲ್ದಾಣದಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು. ಇನ್ನು ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಕೂಡ ಬಣಗುಡುವಂತೆ ಕಂಡು ಬಂತು.
PublicNext
16/01/2022 12:33 pm