ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆಯಾಗುತ್ತಿದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಕಳೆದ 10 ದಿನಗಳಲ್ಲಿ ಇಂದು ಸೇರಿ 8 ಬಾರಿ ಇಂಧನ ಬೆಲೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟಗಾರರ ಮಾಹಿತಿಯನ್ವಯ ಇಂದು ಕೂಡ ಪೆಟ್ರೋಲ್, ಡೀಸೆಲ್‌ಗೆ 25 ಪೈಸೆ ಹೆಚ್ಚಳ ಮಾಡಲಾಗಿದೆ. ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 89.54 ರೂ. ಹಾಗೂ ಡಿಸೇಲ್ ದರ 75.95 ರೂ. ತಲುಪಿದೆ. ಸಾಗಣೆ ವೆಚ್ಚ ಮತ್ತು ವ್ಯಾಟ್ ತೆರಿಗೆ ಮೊದಲಾದ ಕಾರಣದಿಂದ ರಾಜ್ಯಗಳಲ್ಲಿ ತೈಲ ದರದಲ್ಲಿ ವ್ಯತ್ಯಾಸವಿರುತ್ತದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 92.28 ರೂ., ಡೀಸೆಲ್ 84.49 ರೂ. ಇದ್ದರೆ, ಮುಂಬೈನಲ್ಲಿ ಪೆಟ್ರೋಲ್ ದರ 96.00 ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 86.98 ರೂ. ತಲಿಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 90.78 ರೂ., ಡೀಸೆಲ್ 83.54 ರೂ., ಚೆನ್ನೈನಲ್ಲಿ ಪೆಟ್ರೋಲ್ 91.68 ರೂ., ಡೀಸೆಲ್ ಬೆಲೆ 85.01 ರೂ. ಆಗಿದೆ.
PublicNext
17/02/2021 11:05 am