ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಟಾರ್ಟ್ ಅಪ್ ಗೆ ಸಾವಿರ ಕೋ. ರೂ.ನಿಧಿ ಪ್ರಧಾನಿ ಮೋದಿ

ಹೊಸದಿಲ್ಲಿ: ಸ್ಟಾರ್ಟ್ ಅಪ್ ಉದ್ಯಮಗಳನ್ನು ಉತ್ತೇಜಿಸಲು ಹಾಗೂ ನವೋದ್ಯಮಿಗಳಿಗೆ ನೆರವಾಗುವುದಕ್ಕಾಗಿ 1 ಸಾವಿರ ಕೋಟಿ ರೂ.ಗಳ ''ಸ್ಟಾರ್ಟ್ ಆಫ್ ಇಂಡಿಯಾ ಸೀಡ್ ಫಂಡ್'' ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

“ಪ್ರಾರಂಭ: ಸ್ಟಾರ್ಟಪ್ ಇಂಡಿಯಾ ಅಂತಾರಾಷ್ಟ್ರೀಯ ಶೃಂಗ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ನವೋದ್ಯಮಗಳ ಪ್ರಗತಿಯಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಮತ್ತು ಜನರ ಜೀವನಮಟ್ಟ ಸುಧಾರಣೆಯಾಗುತ್ತದೆ.

ಹೀಗಾಗಿ ಇಂಥ ನವೋದ್ಯಮಗಳಿಗೆ ಆರಂಭಿಕ ಬಂಡವಾಳ ಒದಗಿಸುವ ಉದ್ದೇಶದಿಂದ 1,000 ಕೋಟಿ ರೂಪಾಯಿಗಳ ಮೂಲ ನಿಧಿಯನ್ನು ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 2014ರಲ್ಲಿ ದೇಶದಲ್ಲಿ ಕೇವಲ ನಾಲ್ಕು ಸ್ಟಾರ್ಟ ಆಪ್ ಗಳಿದ್ದವು ಆದರೆ ಈಗ ಅವುಗಳ ಸಂಖ್ಯೆ 30 ದಾಟಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಐದನೇ ವರ್ಷಾಚರಣೆಯ ಪ್ರಯುಕ್ತ ಈ ಶೃಂಗಸಭೆಯನ್ನು ಆಯೋಜಿಸಲಾಗಿತ್ತು.

ಭಾರತದಲ್ಲಿ ಸ್ಟಾರ್ಟ್ ಅಪ್ ಗಳು ಕೇವಲ ಬೃಹತ್ ನಗರಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಶೇ. 40ರಷ್ಟು ನವೋದ್ಯಮಿಗಳು ಎರಡನೆ ಹಾಗೂ ಮೂರನೇ ಸ್ತರಗಳ ನಗರಗಳಿಗೆ ಸೇರಿದವರಾಗಿದ್ದಾರೆಂದು ಪ್ರಧಾನಿ ಹೇಳಿದರು.

Edited By : Nirmala Aralikatti
PublicNext

PublicNext

17/01/2021 08:33 am

Cinque Terre

77.73 K

Cinque Terre

0

ಸಂಬಂಧಿತ ಸುದ್ದಿ