ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕೆರೆಯಂತಾದ ಶಾಲಾ ಆವರಣ, ಕ್ಲಾಸ್‌ರೂಂ: ದಿಕ್ಕೆ ತೋಚದೆ ಹೊರ ಉಳಿದ ಸ್ಟೂಡೆಂಟ್ಸ್‌

ಗದಗ: ಮಳೆ ಕಡಿಮೆ ಆದ್ರೂ ಅದರ ಅವಾಂತರ ಮಾತ್ರ ಕಡಿಮೆ ಆಗ್ತಿಲ್ಲ. ಗದಗನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ನಂಬರ್ ೩ ರ ಶಾಲೆಯು ಸಂಪೂರ್ಣ ಜಲಾವೃತವಾಗಿದೆ. ಮಳೆ ಹಾಗೂ ಚರಂಡಿ ನೀರು ಶಾಲೆಗೆ ನುಗ್ಗಿದ್ದು, ಮಳೆ ನೀರಿನಿಂದಾಗಿ ಶಾಲೆಗೆ ದಾರಿ ಯಾವುದಯ್ಯ ಅನ್ನುವಂತಾಗಿದೆ. ಈಗ ಮಳೆ ಅವಾಂತರದಿಂದ ನಾಲ್ಕು ತರಗತಿ ಕೊಠಡಿಗಳು ಹಾಗೂ ಅಡುಗೆ ಕೊಠಡಿ ಸಹ ಜಲಾವೃತವಾಗಿದೆ.

ಮಕ್ಕಳ ಪುಸ್ತಕಗಳು, ಇತರೆ ಪೀಠೋಪಕರಣಗಳು ನೀರುಪಾಲಾಗಿವೆ. ಕೊಠಡಿಗಳಲ್ಲಿ ಅಡಿಯಷ್ಟು ನೀರು ತುಂಬಿಕೊಂಡಿದ್ದು, ತಗ್ಗು ಪ್ರದೇಶದಲ್ಲಿ ಶಾಲೆ ಇರುವುದರಿಂದ ಮೈದಾನ ಸಹ ನೀರು ತುಂಬಿಕೊಂಡಿದೆ. ಚರಂಡಿ ಹೂಳು ತುಂಬಿದ್ದರಿಂದ ನೀರು ಹೊರ ಹೋಗಲು ದಾರಿಯೇ ಇಲ್ಲದಂತಾಗಿದೆ. ೧ ರಿಂದ ೭ನೇ ತರಗತಿ ಮಕ್ಕಳು ಹೊಸ ೩ ಕೊಠಡಿಗಳಲ್ಲಿ ಒಟ್ಟಿಗೆ ಶಿಕ್ಷಣ ಪಡೆಯುವ ಅನಿವಾರ್ಯತೆ ಎದುರಾಗಿದೆ.

ಮಳೆ ಬಂದ್ರೆ ಶಿಕ್ಷಕರು, ಸಿಬ್ಬಂದಿಗಳು ಕಣ್ಣೀರು ಹಾಕುತ್ತಾರೆ. ಶಾಲಾ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಇ ಬಗ್ಗೆ ಶಾಲಾ ಆಡಳಿತ ಮಂಡಳಿಯವರು ಸಂಬಂಧಿಸಿದ ಅಧಿಕಾರಿಗಳು, ನಗರಸಭೆಗೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕಾಗಿದೆ.

Edited By :
PublicNext

PublicNext

05/08/2022 12:37 pm

Cinque Terre

63.4 K

Cinque Terre

0

ಸಂಬಂಧಿತ ಸುದ್ದಿ