ದೋಹಾ: ಏರ್ ಇಂಡಿಯಾ ಸಂಸ್ಥೆಯನ್ನು ನಿರ್ವಹಿಸುವುದು ಟಾಟಾ ಸಂಸ್ಥೆಗೆ ಮಾತ್ರ ಸಾಧ್ಯ ಎಂದು ಎಮಿರೇಟ್ಸ್ ಅಧ್ಯಕ್ಷ ಟಿಮ್ ಕ್ಲಾರ್ಕ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ 78ನೇ ವಾರ್ಷಿಕ ಸಾಮಾನ್ಯ ಸಭೆಯ ಭಾಗವಾಗಿ ಮಾತನಾಡಿದ ಕ್ಲಾರ್ಕ್, ಏರ್ ಇಂಡಿಯಾ ಸೇವೆಯನ್ನು ಶ್ಲಾಘಿಸಿದ್ದಾರೆ.
ಭಾರತದಲ್ಲಿ ವಿಮಾನ ಯಾನ ಸಂಸ್ಥೆ ನಿರ್ವಹಿಸುವುದು ಸುಲಭದ ವಿಚಾರವಲ್ಲ. ಟಾಟಾ ಸಂಸ್ಥೆಯಲ್ಲದೇ ಬೇರೆ ಯಾವುದೇ ಸಂಸ್ಥೆ ಅದನ್ನು ನಿಭಾಯಿಸಲು ಸಾಧ್ಯವಿಲ್ಲ. ದೇಶೀಯ ಮಾರುಕಟ್ಟೆ, ಭಾರತಕ್ಕೆ ಒಳಹರಿವು ಹಾಗೂ ಹೊರಹರಿವಿನ ಆರ್ಥಿಕ ಚಟುವಟಿಕೆಗಳ ಕಾರಣಕ್ಕಾಗಿ ಏರ್ ಇಂಡಿಯಾ ಬೃಹತ್ ಸಂಸ್ಥೆಯಾಗಿ ಬೆಳೆದಿದೆ ಎಂದು ಟಿಮ್ ಕ್ಲಾರ್ಕ್ ಹೇಳಿದ್ದಾರೆ.
PublicNext
22/06/2022 04:55 pm